13 ಕೆರೆಗಳಿಗೆ ನೀರು ಹರಿಸಲು ಎಲ್ಲರೀತಿಯ ಪ್ರಾಮಾಣಿಕ ಪ್ರಯತ್ನ: ಕೆ.ಎಸ್.ಲಿಂಗೇಶ್

13 ಕೆರೆಗಳಿಗೆ ನೀರು ಹರಿಸಲು ಎಲ್ಲರೀತಿಯ ಪ್ರಾಮಾಣಿಕ ಪ್ರಯತ್ನ: ಕೆ.ಎಸ್.ಲಿಂಗೇಶ್
Published on

ಅರಸೀಕೆರೆ: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜತೆಗೆ ಎತ್ತಿನಹೊಳೆ ಯೋಜನೆ ಮೂಲಕ ಜಾವಗಲ್ ಹೋಬಳಿಯ 13 ಕೆರೆಗಳಿಗೆ ನೀರು ಹರಿಸಲು ಎಲ್ಲರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ತಾಲೂಕಿನ ನೇರ‌್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಮನೆ ಮನೆಗೆ ಗಂಗೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಜಲ ಜೀವನ್ ಮಿಷನ್ ಯೋಜನೆಯಡಿ ನದಿ ಮೂಲದಿಂದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಕಾರ್ಯರೂಪದಲ್ಲಿದ್ದು ಹಲವು ಗ್ರಾಮಗಳಲ್ಲಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಜತೆಗೆ ಎತ್ತಿನಹೊಳೆ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸಲು ಡಿಪಿಆರ್ ಸಿದ್ಧವಾಗಿದ್ದು ಜನರ ಬಹುಕಾಲದ ನೀರಿನ ಬವಣೆ ನೀಗಲಿದೆ ಎಂದು ಭರವಸೆ ನೀಡಿದರು.

ಜಿಪಂ ಎಇಇ ಉಮೇಶ್, ಪಿಡಿಒ ಉಷಾ ನಂದಿನಿ,ಗ್ರಾಪಂ ಅಧ್ಯಕ್ಷ ಶಿವಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯ ಸೋಮಶೇಖರ್, ಗ್ರಾಪಂ ಸದಸ್ಯ ಕರುಣಾಕರ್, ಕರಿಬಸಪ್ಪ, ವಿರೂಪಾಕ್ಷಪ್ಪ, ನಂಜುಂಡಪ್ಪ, ಬಸವರಾಜು, ಆನಂದಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net