ಪಿಎಲ್‌ಡಿ ಬ್ಯಾಂಕ್‌ಗೆ 13 ಮಂದಿ ಅವಿರೋಧ ಆಯ್ಕೆ

24 NRD 3'
Published on

ನರಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ 14 ಸದಸ್ಯರ ಪೈಕಿ 13 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1 ಸದಸ್ಯ ಸ್ಥಾನಕ್ಕೆ ಡಿ.29ರಂದು ಚುನಾವಣೆ ನಿಗದಿಯಾಗಿದೆ ಎಂದು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಸವರಾಜ ನಿಡಗುಂದಿ ತಿಳಿಸಿದರು.

ನಗರದ ಕೆಸಿಸಿ ಬ್ಯಾಂಕ್ ಬಳಿಯ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಂಡಳಿಯ ಹಿಂದಿನ ಅಧಿಕಾರವಧಿ ಡಿ.29ಕ್ಕೆ ಮುಕ್ತಾಯಗೊಳ್ಳಲಿದೆ. ನೂತನ ಆಡಳಿತ ಮಂಡಳಿ ಸದಸ್ಯರಾಗಿ ಕುರ್ಲಗೇರಿ ಸಾಮಾನ್ಯ ಕ್ಷೇತ್ರದಿಂದ ಈಶ್ವರಗೌಡ ಪಾಟೀಲ, ಹಿರೇಕೊಪ್ಪದಿಂದ ಶಂಕರಗೌಡ ಪಾಟೀಲ, ಸಂಕಧಾಳದಿಂದ ಅಶೋಕ ಸಾಲೂಟಗಿ, ಕೊಣ್ಣೂರಿನಿಂದ ಯಲ್ಲಪ್ಪಗೌಡ ಪಾಟೀಲ, ಕಣಕೀಕೊಪ್ಪದಿಂದ ಗೌಡಪ್ಪಗೌಡ ಹುಡೇದಮನಿ, ಕಲಕೇರಿಯಿಂದ ಮಹಾಬಳೇಶ್ವರಗೌಡ ಪಾಟೀಲ, ಶಿರೋಳದಿಂದ ನಾಗನಗೌಡ ತಿಮ್ಮನಗೌಡ್ರ. ನರಗುಂದದ ಅರ್ಬನ್ ಮಹಿಳಾ ಕ್ಷೇತ್ರದಿಂದ ರೇಣುಕಾ ಶಿವನಗೌಡ್ರ, ಸೋಮಾಪೂರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮಂಜುಳಾ ಜೋಗಣ್ಣವರ, ಮದಗುಣಕಿಯ ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಬಸಪ್ಪ ಐನಾಪುರ, ದಂಡಾಪುರ ಹಿಂದುಳಿದ ಬ, ವರ್ಗ ಕ್ಷೇತ್ರದಿಂದ ಶಂಕ್ರಪ್ಪ ಬೋಳಶೆಟ್ಟಿ, ವಾಸನ ಗ್ರಾಮದ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಭೀಮಪ್ಪ ನಾಯ್ಕರ, ಬಿನ್ ಸಾಲಗಾರ ಕ್ಷೇತ್ರದಿಂದ ಕಲ್ಲನಗೌಡ ತಿಪ್ಪನಗೌಡ್ರ ಸೇರಿ ಒಟ್ಟು 13 ಜನ ಅವಿರೋಧವಾಗಿ ಆಯ್ಕೆಗೊಂಡಿದಾರೆ ಎಂದರು.

ಹದಲಿ ಗ್ರಾಮದ ಸಾಮಾನ್ಯ ಮಹಿಳಾ ಸಾಲಗಾರರ ಕ್ಷೇತ್ರಕ್ಕೆ ಲಕ್ಷ್ಮೀ ಬಸನಗೌಡ ಕುದರಿ ಹಾಗೂ ಸಂಗಮ್ಮ ರುದ್ರಪ್ಪ ಸುಂಕದ ನಾಮಪತ್ರ ಸಲ್ಲಿಸಿದ್ದು, 29ರಂದು ಆಯ್ಕೆ ಪ್ರಕ್ರಿಯೆ ಜರುಗಿ ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ ಮಾತನಾಡಿ, 14 ಸದಸ್ಯರ ಪೈಕಿ 8 ಕಾಂಗ್ರೆಸ್ ಬೆಂಬಲಿತರು, 5 ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದರು. ಶಂಕರಗೌಡ ಪಾಟೀಲ, ಸುರೇಶ ಹುಡೇದಮನಿ, ಮಹೇಶ ಬೋಳಶೆಟ್ಟಿ, ಕಲ್ಲನಗೌಡ ತಿಪ್ಪನಗೌಡ್ರ, ಅಶೋಕ ಸಾಲೂಟಗಿ, ಪಿಎಲ್‌ಡಿ ಬ್ಯಾಂಕ್ ಮ್ಯಾನೇಜರ್ ಆಲೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net