

ಶಿಕಾರಿಪುರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಸಣ್ಣ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಯಾಯುದೇ ರೀತಿಯಲ್ಲಿ ಜನ ಜಾನುವಾರುಗಳಿಗೆ, ಆಸ್ತಿ ಪಾಸ್ತಿಗಳಿಗೆ ಹಾನಿಯಾದ ವರದಿಯಾಗಿಲ್ಲ.
ಶನಿವಾರ ಮತ್ತು ಭಾನುವಾರ ತಾಳಗುಂದ ಹೋಬಳಿಯಲ್ಲಿ 47ಮಿಮೀ ಮಳೆಯಾಗಿದೆ. ಹೊಸೂರು, ಕಸಬಾ ಮತ್ತು ಅಂಜನಾಪುರ, ಉಡುಗಣಿ ಹೋಬಳಿಗಳಲ್ಲಿ 36 ಮಿಮೀಗೂ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಭತ್ತದ ನಾಟಿ ಮಾಡುವ ರೈತರಿಗೆ ಬಹುತೇಕ ಅನುಕೂಲವಾಗಿದೆ. ರೈತರು ಈ ಮಳೆಗೆ ಭತ್ತದ ನಾಟಿ ಮಾಡಲು ನೆಲ ಹದ ಮಾಡಿಕೊಳ್ಳುತ್ತಿz್ದÁರೆ. ಕೆಸರು ಮಾಡಿ ಅದನ್ನು ಭತ್ತದ ನಾಟಿಗೆ ಪೂರಕವಾಗಿ ಹದಗೊಳಿಸುತ್ತಿರುವುದು ಕಂಡು ಬರುತ್ತಿದೆ.
ತಾಲೂಕಿನ ಜೀವಜಲವಾಗಿರುವ ಅಂಜನಾಪುರ ಜಲಾಶಯದಲ್ಲಿ 13 ಅಡಿಗೂ ಹೆಚ್ಚು ನೀರು ಬಂದಿದೆ. ತುಂಗಾ ನೀರು ಹರಿದು ಬರುತ್ತಿರುವುದರಿಂದ ಈ ತಿಂಗಳಲ್ಲಿಯೇ ಕೋಡಿ ಬೀಳುವ ಲಕ್ಷಣಗಳಿವೆ. ಕಳೆದ ಬಾರಿ ಜುಲೈ ಎರಡನೇ ವಾರದಲ್ಲಿಯೇ ಕೋಡಿ ಬಿದ್ದಿತ್ತು. ಅಂಬ್ಲಿಗೊಳ ಜಲಾಶಯಕ್ಕೆ ಸಾಗರ ಭಾಗದಲ್ಲಿ ಒಳ್ಳೆಯ ಮಳೆ ಆಗುತ್ತಿರುವುÀದರಿಂದ ಸುಮಾರು 15 ಅಡಿಯಷ್ಟು ನೀರು ಬಂದಿದೆ.
ಕಳೆದ ವರ್ಷ ಈ ಸಮಯದಲ್ಲಿ ಆಗಲೇ ರೈತರು ಭತ್ತದ ನಾಟಿ ಶುರು ಮಾಡಿದ್ದರು. ಈ ತಿಂಗಳಾAತ್ಯದಲ್ಲಿ ಬಹುತೇಕ ಭತ್ತದ ನಾಟಿ ಕಾರ್ಯ ಮುಗಿದಿತ್ತು. ಈ ಬಾರಿ ಈ ತಿಂಗಳಾAತ್ಯದಲ್ಲಿ ಭತ್ತದ ನಾಟಿ ಪ್ರಾರಂಭವಾಗಬಹುದು. ಈಗ ಕೆಲವು ಭಾಗಗಳಲ್ಲಿ ರೈತರು ಭತ್ತದ ಸಸಿಮಡಿ ಮಾಡುತ್ತಿz್ದÁರೆ. ಈ ಬಾರಿ ಭತ್ತದ ನಾಟಿ ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಮುಂದೆ ಹೋಗುವ ಸಾಧ್ಯತೆಯಿದೆ.