ಬಾಡಿಗೆ ತುಂಬದ್ದಕ್ಕೆ ಶಿರಹಟ್ಟಿ ಪಪಂ 13 ಮಳಿಗೆಗಳು ವಶಕ್ಕೆ

22srt-1 MALIGE LILAVU
Published on

ಶಿರಹಟ್ಟಿ: ಪಪಂ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮಳಿಗೆ ಬಾಡಿಗೆ ತುಂಬದ್ದರಿಂದ ಪಪಂ ಮುಖ್ಯಾಧಿಕಾರಿ ಎಸ್.ಆರ್. ಕಟ್ಟಿಮನಿ ಮತ್ತು ಸಿಬ್ಬಂದಿ 13 ಮಳಿಗೆಗಳಿಗೆ ಬೀಗ ಜಡಿದು ಪಪಂ ವಶಕ್ಕೆ ಪಡೆದುಕೊಂಡರು.


ಈ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮಾನುಸಾರ ಮಳಿಗೆ ಹರಾಜು ಮಾಡಿದ ಬಳಿಕ 12 ವರ್ಷದವರೆಗೆ ಉಪಯೋಗಿಸಲು ಅವಕಾಶವಿದೆ.

ಆದರೆ, ಕಳೆದ 25 ವರ್ಷಗಳಿಂದ ವಿವಿಧ ಯೋಜನೆಯಡಿ ನಿರ್ಮಿಸಿದ ಮಳಿಗೆಗಳು ಹರಾಜು ಆಗದೇ ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಇದರಲ್ಲಿ ಕೆಲವರು ಸಕಾಲಕ್ಕೆ ಮಳಿಗೆ ಬಾಡಿಗೆ ಹಣ ತುಂಬುತ್ತ ಬಂದಿದ್ದಾರೆ.

ಸದರಿ ಮಳಿಗೆಗಳಲ್ಲಿ 13 ಮಳಿಗೆಗಳ ಮಾಲೀಕರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ ಹಣ ತುಂಬದ ಕಾರಣಕ್ಕೆ ಅವುಗಳಿಗೆ ಬೀಗ ಜಡಿದು ಪಪಂ ವಶಕ್ಕೆ ಪಡೆಯಲಾಗಿದೆ.


ಪಪಂ.ಗೆ ಆದಾಯ ತಂದುಕೊಡುವ ಮಾರಾಟ ಮಳಿಗೆಗಳನ್ನು ಜು. 26ರಂದು ಪಪಂ ಹಳೇ ಕಾರ್ಯಾಲಯದಲ್ಲಿ ಬೆಳಗ್ಗೆ 11ಕ್ಕೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net