ಶೇ.13 ಲಾಭಾಂಶ ವಿತರಣೆ

24blh10 ಮಲ್ಲಮ್ಮ ಬ್ಯಾಂಕ್
Published on

ಬೈಲಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೀರರಾಣಿ ಮಲ್ಲಮ್ಮ ಅರ್ಬನ್​ ಕ್ರೆಡಿಟ್​ ಸೌಹಾರ್ದ ಸಹಕಾರಿ ಪ್ರಸಕ್ತ ಸಾಲಿನಲ್ಲಿ 60.10 ಲ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.13 ಲಾಭಾಂಶ ವಿತರಿಸಲಿದೆ ಎಂದು ಉಪಾಧ್ಯ ಎನ್​.ಎಂ.ಕರೀಕಟ್ಟಿ ಹೇಳಿದರು.

ಸಹಕಾರಿಯ 33 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರಿಯ ಸಂಸ್ಥಾಪಕ ದಿ.ಡಾ.ಆರ್​.ಬಿ.ಪಾಟೀಲ ಕಂಚಿನ ಮೂರ್ತಿ ಸಹಕಾರಿಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.

ನಿರ್ದೇಶಕ ಎಂ.ಬಿ.ಹಿರೇಮಠ ವರದಿ ಓದಿ, ಸಹಕಾರಿ 68.48 ಕೋಟಿ ರೂ. ದುಡಿಯುವ ಬಂಡವಾಳ, 60 ಕೋಟಿ ರೂ. ಠೇವಣಿ, 75.39 ಲ ರೂ. ಷೇರು, 4.81 ಕೋಟಿ ರೂ. ನಿಧಿ, 18.50 ಕೋಟಿ ರೂ. ಗುಂತಾವಣೆ ಹೊಂದಿದ್ದು, 36.28 ಕೋಟಿ ರೂ. ಸಾಲ ವಿತರಿಸಿ 253.50 ಕೋಟಿ ರೂ. ವ್ಯವಹಾರ ಮಾಡಿದೆ ಎಂದರು.

ನಿರ್ದೇಶಕ ಆರ್​.ಎಸ್​.ರೊಟ್ಟಯ್ಯನವರ ಪ್ರಾಸ್ತಾವಿಕ ಮಾತನಾಡಿದರು. ಡಾ.ಆರ್​.ಬಿ.ಪಾಟೀಲ ಸವಿನೆನಪಿಗಾಗಿ ಎಂಬಿಬಿಎಸ್​, ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಸಾಧಕರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ನಿವತ್ತ ಶಿಕ ಎಂ.ಎಸ್​.ಕಿರೋಜಿ ಅಧ್ಯತೆ ವಹಿಸಿದ್ದರು. ನಿರ್ದೇಶಕರಾದ ಆರ್​.ಎಸ್​.ರೊಟ್ಟಯ್ಯನವರ, ಎಸ್​.ಎನ್​.ಕುಲಕರ್ಣಿ, ಬಿ.ಆರ್​.ಪಾಟೀಲ, ಬಸವರಾಜ ಬಳಿಗಾರ, ಪಾರ್ವತೆವ್ವ ಬಳಿಗಾರ, ಮಹಾದೇವಿ ಹಳ್ಳದಕೇರಿ, ಬಿ.ಎಸ್​.ಪೂಜೇರ, ಆರ್​.ಐ.ರಾಯೇಜಿ, ಬೆಲಹೊಂಗಲ ಶಾಖೆಯ ನಿರ್ದೇಶಕರಾದ ಶಂಕರ ಮಾಡಲಗಿ, ಡಿ.ಎಸ್​.ಶೀಲವಂತರ, ಕೆ.ಎಂ.ಬಿರಾದಾರ, ರಾಜು ಭರಮಗೌಡ್ರ, ಕಿತ್ತೂರ ಶಾಖೆಯ ನಿರ್ದೇಶಕ ಉಮೇಶ ಮಾಡಿಕ, ಪ್ರಧಾನ ವ್ಯವಸ್ಥಾಪಕ ಎಸ್​.ಬಿ. ಹುಡೇದ, ಸಿಬ್ಬಂದಿ ಎ.ಎಂ.ಮುರಗೋಡ, ಎಸ್​.ಎನ್​.ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net