

ಚಿತ್ರದುರ್ಗ: ನಗರದ ವಿಪಿ ಅಕಾಡೆಮಿ, ದಿನಸಿ ಫೋರ್ಟ್ ಸೂಪರ್ ಮಾರ್ಕೆಟ್ ಹಾಗೂ ರಂಗಸೌರಭ ಕಲಾ ಸಂಘದ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ನ. 12ರಿಂದ 2 ದಿನಗಳ ಕಾಲ ಸಂಜೆ 6.30ಕ್ಕೆ ನೀನಾಸಂ ತಿರುಗಾಟ-2024ರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡುವರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ರಂಗ ಸಂಘಟಕ ಎಂ.ವಿ. ನಟರಾಜ,ಪ್ರಾಧ್ಯಾಪಕ ಎಂ.ವಿ. ನಾಗರಾಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. 12ರಂದು ಮಾಲತೀಮಾಧವ ಹಾಗೂ 13ರಂದು ಅಂಕದ ಪರದೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಘದ ಅಧ್ಯಕ್ಷ ಡಾ.ಕೆ.ಮೋಹನ್ ಕುಮಾರ್ ತಿಳಿಸಿದ್ದಾರೆ.