12ರಂದು ಭಗವಾನ್ ಬುದ್ಧ ಜಯಂತಿ

Budda Jyanthi---------------
Published on

ಚಿತ್ರದುರ್ಗ: ಭಗವಾನ್ ಬುದ್ಧರ ಸಂದೇಶ ಸಾರುವ ನಿಟ್ಟಿನಲ್ಲಿ ಮೇ12ರಂದು ಬುದ್ಧ ಜಯಂತಿ ಆಚರಿಸಲಾಗುವುದು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಶನಿವಾರ ಎಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬುದ್ಧನ ಚಿಂತೆನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮ ಸಮಾಜದ ನಿರ್ಮಾಣಕ್ಕೆ ಬುದ್ಧ ತತ್ವಗಳು ಆಧಾರವಾಗಿವೆ. ಇವುಗಳನ್ನು ಜನ ಮಾನಸದಲ್ಲಿ ಪಸರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಭಗವಾನ್ ಬುದ್ಧ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 11ಕ್ಕೆ ಬುದ್ಧನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ಸಮೀಪದ ಭಗವಾನ್ ಬುದ್ಧನ ಪುತ್ಥಳಿ ಬಳಿ ಜಯಂತ್ಯುತ್ಸವ ಆಯೋಜಿಸಲಾಗುವುದು. ಬುದ್ಧನ ಕುರಿತು ಸಿ.ಕೆ. ಮಹೇಶ್ವರಪ್ಪ ಉಪನ್ಯಾಸ ನೀಡಲಿದ್ದಾರೆ. ಸಂಗೀತ ಕಾರ್ಯಕ್ರಮವಿರುತ್ತ ದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ತಹಸೀಲ್ದಾರ್ ಗೋವಿಂದರಾಜು, ನವಯಾನ ಬೌದ್ಧ ಸಂಘದ ಕುಮಾರ್ ಜೆಜೆ ಹಟ್ಟಿ, ಗೌತಮ ಬುದ್ಧ ಪ್ರತಿಷ್ಠಾನದ ಬಿ.ಪಿ. ತಿಪ್ಪೇಸ್ವಾಮಿ, ನವಯಾನ ಬೌದ್ಧ ಪಂಥದ ಡಿ.ದುರ್ಗೇಶ್, ಸಾಮಾಜಿಕ ಸಂಘರ್ಷ ಸಮಿತಿ ಆರ್. ರಾಮಲಿಂಗಪ್ಪ, ಕೆ. ಕುಮಾರ್, ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜಮೂರ್ತಿ, ದಲಿತ ಸಂಘರ್ಷ ಸಮಿತಿಯ ಎಸ್. ಮಲ್ಲಿಕಾರ್ಜುನ್, ವೈ. ರಾಜಣ್ಣ ತುರವನೂರು, ಮಾದಿಗ ಹೋರಾಟ ಸಮಿತಿ ಸದಸ್ಯ ಹುಲ್ಲೂರು ಕುಮಾರಸ್ವಾಮಿ, ವಕೀಲರಾದ ಚಂದಪ್ಪ, ರಾಜಣ್ಣ, ಜಯಪ್ಪ ಮತ್ತಿತರರು ಇದ್ದರು.

-----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net