

ಕಲಬುರಗಿ: ಹನ್ನೆರಡನೇ ಶತಮಾನ ವಚನ ಸಾಹಿತ್ಯದ ಯುಗವಾಗಿದ್ದು, ಶರಣರ ಚಿಂತನೆಗಳು ಎಲ್ಲ ವರ್ಗವನ್ನು ಪ್ರತಿನಿಧಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಹಾಗೂ ಶರಣ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿದರು.
ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಸುಭಾಶ್ಚಂದ್ರ ಸ್ಮಾರಕ ಜನಕಲ್ಯಾಣ ಟ್ರಸ್ಟ್ನಿಂದ ಭಾನುವಾರ ಆಯೋಜಿಸಿದ್ದ ಜಿ¯್ಲÁ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವ ಎಷ್ಟು ಮುಖ್ಯವೋ ಜೀವನ ಅಷ್ಟೇ ಮುಖ್ಯ. ದಯೆ, ಅಹಿಂಸೆ, ತ್ಯಾಗ, ಪ್ರೀತಿ, ಭಕ್ತಿಯ ಉಕ್ತಿ ನಾವಿಂದು ಪಾಲಿಸಲೇಬೇಕಾಗಿದೆ. ದಯವಿಲ್ಲದೆ ಧರ್ಮವಿಲ್ಲ ಎಂಬುದು ತಿಳಿದು ನಡೆಯಬೇಕಿದೆ ಎಂದರು.
ಹಿAಸೆ ಮಾಡುವುದು ಮನುಷ್ಯರ ಲP್ಷÀಣವಲ್ಲ. ತನಗಿಂತ ಶಕ್ತಿಹೀನರನ್ನು ಹಿಂಸೆ ಮಾಡುವದಾಗಲಿ ಕೊಲೆ, ಸುಲಿಗೆ ಮಾಡುವುದು ಜಾತಿ, ಜಾತಿಗಳಲ್ಲಿ ಕಚ್ಚಾಟ, ಮನುಷ್ಯ ಮನುಷ್ಯನಲ್ಲಿ ಕಚ್ಚಾಟ ಹೀಗೆ ಹತ್ತಾರು ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಿಂದ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ್ ಮಾತನಾಡಿ, ೧೨ನೇ ಶತಮಾನದಲ್ಲಿ ಕ್ರಾಂತಿಕಾರಿ ಚಳವಳಿ ಆಗಿತ್ತು. ಅದರ ಮುಖ್ಯ ಆಶಯ ಕಾಯಕವಾಗಿತ್ತು. ಆದರೆ ಈಗ ಜನರನ್ನು ನೋಡುವುದು ಜಾತಿ, ಧರ್ಮದ ಮೇಲೆ ಸೀಮಿತವಾಗಿದೆ. ಹೀಗಾಗದಂತೆ ಎಲ್ಲರೂ ಒಂದೇ ಎಂಬ ಭಾವದಿಂದ ಕಾಯಕ ಜೀವನ ನಡೆಸಬೇಕು ಎಂದರು.
ಟ್ರಸ್ಟ್ ಅಧ್ಯP್ಷÀ ಶರಣಗೌಡ ಪಾಟೀಲï ಪಾಳಾ ಅಧ್ಯP್ಷÀತೆ ವಹಿಸಿದ್ದರು. ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು, ಶ್ರೀ ಶರಣಯ್ಯ ಸ್ವಾಮೀಜಿ, ಚಿ.ದೊಡ್ಡಪ್ಪ ಅಪ್ಪ, ಪ್ರಭುಶ್ರೀ ತಾಯಿ, ಶಾಸಕರಾದ ಬಿ.ಆರ್.ಪಾಟೀಲï, ಅಲ್ಲಮಪ್ರಭು ಪಾಟೀಲï, ಪ್ರಮುಖರಾದ ಬಸವರಾಜ ದೇಶಮುಖ, ಶಿವಕಾಂತ ಮಹಾಜನ್, ನೀಲಕಂಠರಾವ ಮೂಲಗೆ, ದಿಲೀಪ ಪಾಟೀಲï, ಶಿವಪ್ರಭು ಪಾಟೀಲ್, ಸುನೀಲï ಪಾಟೀಲ್, ವಿನೋದ ಪಾಟೀಲ್, ಮಲ್ಲಿನಾಥ ಪಾಟೀಲ್, ಡಾ.ಕಲ್ಯಾಣರಾವ ಪಾಟೀಲï, ಅಪ್ಪಾರಾವ ಅಕ್ಕೋಣಿ, ಅಂಬಯ್ಯ ಗುತ್ತೇದಾರ್, ಮೀನಾಕ್ಷಿ ಗುತ್ತೇದಾರ್ ಇತರರಿದ್ದರು.
ಡಾ.ಆನಂದ ಸಿದ್ದಾಮಣಿ ನಿರ್ಣಯಗಳನ್ನು ಮಂಡಿಸಿದರು. ಪ್ರೊ.ಯಶವಂತರಾಯ ಅಷ್ಠಗಿ ಪ್ರಾಸ್ತಾವಿಕ ಮಾತನಾಡಿದರು. ನಾಗಲಿಂಗಯ್ಯ ಮಠಪತಿ ನಿರೂಪಣೆ ಮಾಡಿದರು. ಶಾಂತಕುಮಾರ ಪಾಟೀಲ್ ಇತರರಿದ್ದರು.