

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ನಿರ್ಗತಿಕರು ಹಾಗೂ ನಿವೇಶನ ರಹಿತರಿಗೆ ಹಂಚಿಕೆಯಾಗಬೇಕಾಗಿರುವ ಸರ್ಕಾರದ ಉಚಿತ ನಿವೇಶನಗಳು ಡಾಲರ್ಸ್ ಕಾಲನಿಯಲ್ಲಿ ಎರಡು ಅಂತಸ್ತು ಬಂಗ್ಲೆ ಮತ್ತು ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಕಟ್ಟಡ ಹೊಂದಿರುವ ಮಾಲೀಕರ ಪಾಲಾಗುತ್ತಿರುವ ಆರೋಪ ಕೇಳಿ ಬಂದಿದೆ.
ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳ ವ್ಯಾಪ್ತಿಯಲ್ಲಿರುವ ಬಡತನ ರೇಖೆಗಿಂತ ಕೆಳಗಿನವರು ಹಾಗೂ ನಿರ್ಗತಿಕರಿಗೆ ಉಚಿತ ನಿವೇಶನ ನೀಡುವ ಉದ್ದೇಶಕ್ಕಾಗಿ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಸರ್ಕಾರದಿಂದ ಪಟ್ಟಣ ಹೊರವಲಯದಲ್ಲಿರುವ 6.5 ಎಕರೆ ಜಮೀನನ್ನು ಗುರುತಿಸಲಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ನಿಯಮಾನುಸಾರ ವಾರ್ಡ್ವಾರು ಸರ್ವೇ ಕಾರ್ಯ ಪ್ರಾರಂಭಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪಟ್ಟಿ ಸಲ್ಲಿಸಲು 2017ನೇ ಸಾಲಿನ ಜನವರಿಯಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅದರಂತೆ 2018ನೇ ಮಾರ್ಚ್ 8ರಂದು ಬಾಗೇಪಲ್ಲಿ ಪುರಸಭೆ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಅಶ್ರಯ ಸಮಿತಿ ಸದಸ್ಯರ ಸಭೆ ಕರೆದು 1574 ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ, ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಮುದ್ರೆ ಒತ್ತಿದ್ದಾರೆ.
ಇದರ ನಡುವೆ ಅನರ್ಹ ಫಲಾನುಭವಿಗಳಿಗೆ ಹಂಚಿಕೆಯು ಆಕ್ರೋಶಕ್ಕೆ ಕಾರಣವಾಗಿದೆ. ವಸತಿ ನಿಗಮದ ಮಾರ್ಗಸೂಚಿ ಉಲ್ಲಂಸಿ ರಾಜಕೀಯ ಬಲಾಢ್ಯರಿಗೆ, ಶ್ರೀಮಂತ ವರ್ಗಗಳಿಗೆ, ಲಂಚ ನೀಡಿರುವವರಿಗೆ ಉಚಿತ ನಿವೇಶನಗಳನ್ನು ಹಂಚಿಕೆ ಮಾಡಿ ಅನುಮೋದಿಸಿದ್ದು, ಬಡಪಾಯಿಗಳಿಗೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಮರು ಸರ್ವೇ ನಡೆಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ.
3718 ಅಜಿರ್ ಸ್ವೀಕಾರ: ಪಟ್ಟಣದ 23 ವಾರ್ಡ್ಗಳಿಂದ ಉಚಿತ ನಿವೇಶನಕ್ಕಾಗಿ 3718 ಅಜಿರ್ಗಳನ್ನು ಸ್ವೀಕರಿಸಿದ್ದು, ಇದನ್ನು ಪರಿಶೀಲಿಸಿ, 1574 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಉಚಿತ ನಿವೇಶನಕ್ಕೆ ಹಣ ವಸೂಲಿ?: ಉಚಿತ ನಿವೇಶನಗಳ ಹಂಚಿಕೆಯ ಅನುಮೋದಿತ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಲವು ವಂಚನೆಗಳು ಬೆಳಕಿಗೆ ಬರುತ್ತಿವೆ. ಉಚಿತ ನಿವೇಶನ ಮಂಜೂರಾತಿಗೆ ಪುರಸಭೆ ಸದಸ್ಯರ ಶಿಫಾರಸು ಕಡ್ಡಾಯ. ಇದಕ್ಕೆ ಬಡಪಾಯಿಗಳನ್ನು ನಂಬಿಸಿ ಒಂದೊಂದು ನಿವೇಶನಕ್ಕೆ 30 ಸಾವಿರ ರೂ.ಗಳಿಂದ 50 ಸಾವಿರ ರೂ. ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿವೆ.
ನಿವೇಶನಕ್ಕೆ ಮಾರ್ಗರ್ಸೂಚಿಗಳೇನು: ಉಚಿತ ನಿವೇಶನಕ್ಕೆ ಕಡ್ಡಾಯವಾಗಿ ಅಜಿರ್ದಾರರು ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ವಾಷಿರ್ಕ ಆದಾಯ 32 ಸಾವಿರ ರೂ. ಒಳಗಿರಬೇಕು. ಫಲಾನುಭವಿಗಳು ಕಡ್ಡಾಯವಾಗಿ ಮಹಿಳೆ ಆಗಿರಬೇಕು. ಹಿಂದೆ ಸರ್ಕಾರದ ಇತರ ಯೋಜನೆಯಲ್ಲಿ ವಸತಿ ಸೌಲಭ್ಯ ಪಡೆದಿರಬಾರದು. ಬಡತನ ರೇಖೆಗಿಂತ ಕೆಳಗಿನವರು ಆಗಿರಬೇಕು ಎಂಬ ನಿಯಮವಿದೆ.
ವಾಜಪೇಯಿ ನಗರ ನಿವೇಶನ ಯೋಜನೆ ಹಾಗೂ ವಸತಿ ಯೋಜನೆಯ ಅನುಮೋದಿತ ಲಾನುಭವಿಗಳ ಪಟ್ಟಿ ಪರಿಶೀಲಿಸಿದ್ದು, ಮಾರ್ಗಸೂಚಿ ಉಲ್ಲಂನೆ ಮಾಡಿ ನಿವೇಶನ ಪಡೆದುಕೊಳ್ಳುತ್ತಿರುವವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿದ್ದೇವೆ. ಪುರಸಭೆ ವ್ಯಾಪ್ತಿಯಲ್ಲಿ ವಾಸವಿರುವ ಲಾನುಭವಿಗಳಿಗೆ ಮಾತ್ರ ಸರ್ಕಾರಿ ಉಚಿತ ನಿವೇಶನದ ಸೌಲಭ್ಯ ಕಲ್ಪಿಸುತ್ತೇವೆ. ಕೆ.ಮಧುಕರ್, ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ === 2018ನೇ ಸಾಲಿನ ಅಶ್ರಯ ಸಮಿತಿ ಸಭೆಯಲ್ಲಿ ಅನುಮೋದಿಸಿರುವ ಆಯ್ಕೆ ಪಟ್ಟಿಯಲ್ಲಿ ಮಾರ್ಗಸೂಚಿ ಉಲ್ಲಂಸಿ ಮನೆ ಇರುವವರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಉಚಿತ ನಿವೇಶನಕ್ಕಾಗಿ ಅಜಿರ್ ಸಲ್ಲಿಸಿರುವ ಬಗ್ಗೆ ದಾಖಲೆಗಳಿದ್ದರೂ ಹಲವು ಅಜಿರ್ದಾರರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸದೆ ತಾರತಮ್ಯ ಮಾಡಲಾಗಿದೆ. ಮತ್ತೆ ಹೊಸದಾಗಿ ಅಜಿರ್ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಬಿ.ಆರ್.ನರಸಿಂಹನಾಯ್ಡು, ಮಾಜಿ ಅಧ್ಯಕ್ಷ, ಪುರಸಭೆ ಬಾಗೇಪಲ್ಲಿ