ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ ಪ್ರಥಮ ಸುತ್ತಿಗೆ 1,260 ಅಭ್ಯರ್ಥಿಗಳು ಆಯ್ಕೆ

6KWR2 uddoga mela
Published on

ಕಾರವಾರ: ಇಲ್ಲಿನ ದಿವೇಕರ್ ಮಹಾವಿದ್ಯಾಲಯದಲ್ಲಿ ಕೆನರಾ ವೆಲ್​ಫೇರ್ ಟ್ರಸ್ಟ್​ನಿಂದ ಭಾನುವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 1,260 ಅಭ್ಯರ್ಥಿಗಳು ಪ್ರಥಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಒಟ್ಟು 31 ಕಂಪನಿಗಳು ಪಾಳ್ಗೊಂಡಿದ್ದವು. ಎಸ್​ಎಸ್​ಎಲ್​ಸಿ ಯಿಂದ ಸ್ನಾತಕೋತ್ತರ ಪದವಿವರೆಗೆ 2,850 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಸಂದರ್ಶನ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸತೀಶ ಸೈಲ್, ಕೈಗಾ, ಸೀಬರ್ಡ್​ನಂಥ ರಾಷ್ಟ್ರೀಯ ಯೋಜನೆಗಳಿದ್ದರೂ ಸ್ಥಳೀಯರಿಗೆ ಅವಕಾಶ ಸಿಗದ ಕೊರಗು ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.


ಮೇಳದ ಪ್ರಾಯೋಜಕ, ಸುಪ್ರೀಂ ಕೋರ್ಟ್ ವಕೀಲ ದೇವದತ್ತ ಕಾಮತ್, ಪದವೀಧರರು ಓದಿನ ಜತೆಗೆ ಉದ್ಯೋಗಪತಿಗಳು ಬಯಸುವ ಕೌಶಲ ಹಾಗೂ ಚಾಣಾಕ್ಷತೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಕೆನರಾ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ್, ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ದಿವೇಕರ್ ಕಾಲೇಜ್ ಪ್ರಾಂಶುಪಾಲ ಕೇಶವ ಕೆ.ಜಿ. ಸ್ವಾಗತಿಸಿದರು. ಪ್ರಾಚಾರ್ಯ ಡಾ. ಕೇಶವ ಕೆ.ಜಿ. ಸ್ವಾಗತಿಸಿದರು.

ವೇದಿಕೆಯಲ್ಲಿ ಮೆರಿಟ್ಟುಡ್ ಸ್ಕಿಲ್ ಡೆವಲಪ್​ವೆುಂಟ್ ಪ್ರೈವೆಟ್ ಲಿಮಿಟೆಡ್​ನ ಫಯಾಜ್ ಅಹಮದ್, ಮೇಳದ ಪ್ರಾಯೋಜಕ ನಾಗರಾಜ ಮಡಿವಾಳ , ಕೆನರಾ ವೆಲ್​ಫೇರ್ ಟ್ರಸ್ಟ್ ಟ್ರಸ್ಟಿಗಳಾದ ಡಾ. ವಿ.ಎನ್. ನಾಯಕ, ಮುರುಳಿಧರ ಪ್ರಭು, ಡಾ. ಕೃಷ್ಣ ಪ್ರಭು ಇತರರು ಇದ್ದರು. ಸಾಯಿಶ್ರೀ ಸಂತೋಷ ಶೇಟ್ ಪ್ರಾರ್ಥಿಸಿದರು. ಉಪನ್ಯಾಸಕಿ ಸ್ನೇಹಲ್ ರೇವಣಕರ್ ಹಾಗೂ ಅನೀತಾ ತಿಳವೆ ಅತಿಥಿಗಳನ್ನು ಪರಿಚಯಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯು ಲಲಿತಾ ಶೆಟ್ಟಿ ವಂದಿಸಿದರು. ಉಪನ್ಯಾಸಕ ರಾಜೇಶ ಮರಾಠಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net