

ಚಿಕ್ಕಮಗಳೂರು: ಜನತೆ ಹಸಿನಿಂದ ಬಳಲಬಾರದೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ನಿವಾಸಿಗಳಿಗೆ ಅಕ್ಕಿ ಬಾಬ್ತು ಆರಂಭದಿAದ ಸುಮಾರು ೧೨೬ ಕೋಟಿ ರೂ. ಗಳನ್ನು ಫಲಾನುಭವಿಯ ಖಾತೆಗೆ ಭರಿಸಿ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨.೫೯ ಲಕ್ಷ ಕಾರ್ಡ್ಗಳ ಪೈಕಿ ೮.೩೮ ಲಕ್ಷ ಮಂದಿಗೆ ಪ್ರತಿತಿಂಗಳು ೧೩ ಕೋಟಿ ರೂ.ಗಳ ಅನ್ನಭಾಗ್ಯದ ಮೊತ್ತವನ್ನು ರಾಜ್ಯಸರ್ಕಾರ ಭರಿಸಿ ಸಾರ್ವಜನಿಕರಿಗೆ ಸಹಾಯಹಸ್ತ ಕಲ್ಪಿಸಿದೆ ಎಂದರು.
ಕಳೆದ ಸಾಲಿನ ಜುಲೈ ತಿಂಗಳಿನಿAದ ಆರಂಭಗೊAಡ ಅನ್ನಭಾಗ್ಯ ಯೋಜನೆಯಿಂದ ಜಿಲ್ಲೆಯ ಲಕ್ಷಾಂತರ ಮಂದಿಗೆ ೧೨೬ ಕೋಟಿ ರೂ. ಗಳನ್ನು ಆಹಾರ ಖರೀದಿಸಲು ಕುಟುಂಬದ ಯಜಮಾನಿಗೆ ಹಣ ಸಂದಾಯ ಮಾಡಲಾಗಿದೆ. ಇಂತಹ ಮಹಾತ್ವಕಾಂಕ್ಷೆ ಯೋಜನೆಯನ್ನು ಜನತೆ ದುರ್ಬಳಕೆ ಮಾಡಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಅನ್ನಭಾಗ್ಯ ಯೋಜನೆ ಸೌಲಭ್ಯಗಳು ಯಾವ ಕುಟುಂಬಕ್ಕೆ ತಲುಪಿಲ್ಲ, ಅಂಥ ಕುಟುಂಬಗಳು ಅರ್ಹತೆ ಹೊಂದಿದ್ದಲ್ಲಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಮುಂಬರುವ ದಿನಗಳಲ್ಲಿ ಸೌಲಭ್ಯದಿಂದ ವಂಚಿತಗೊಳ್ಳದAತೆ ಸಮರ್ಪಕವಾಗಿ ರಾಜ್ಯಸರ್ಕಾರ ಐದು ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಆಹಾರ ಪಡಿತರ ವಿತರಣೆ ವೇಳೆಯಲ್ಲಿ ಅರ್ಜಿ ಸಲ್ಲಿಸುವುದು ಆನ್‌ಲೈನ್ ಮೂಲಕವೇ ಇರುವುದರಿಂದ ಗ್ರಾಮ್-೧ ವ್ಯವಸ್ಥೆ ತಾಂತ್ರಿಕ ಕಾರಣದಿಂದ ಸರಿಯಾದ ರೀತಿಯ ಲ್ಲಿ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ಜಿಲ್ಲೆಯ ಸುಮಾರು ೪ ಸಾವಿರ ಮಂದಿ ಈ ಯೋಜನೆಯಿಂದ ವಂಚಿತರಾಗಿದ್ದು, ಮುಂದೆ ಅವರಿಗೆ ಯೋಜನೆಯ ಸವಲತ್ತು ಒದಗಿಸಲಾಗುವುದು ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಪ್ರತಿ ಬಡವರ ಮನೆಗಳಿಗೆ ಪ್ರತಿದಿನದ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ವೇಳೆ ಸೆ. ೧೫ರಂದು ನಡೆಯುವ ಸಂವಿಧಾನ ದಿನಾಚರಣೆ ಅಂಗವಾಗಿ ಮಾನವ ಸರಪವಳಿಯಲ್ಲಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವಂತೆ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷೆ ಹೇಮಾವತಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಮಲ್ಲೇಶಸ್ವಾಮಿ, ಎನ್.ಆರ್.ಪುರ.ಅಧ್ಯಕ್ಷೆ ಚಂದ್ರಮ್ಮ, ಶೃಂಗೇರಿ ಅಧ್ಯಕ್ಷ ರಾಜು, ಸದಸ್ಯರಾದ ಜೇಮ್ಸ್ ಡಿಸೋಜಾ, ಬಸವರಾಜ್, ಶಫಿವುಲ್ಲಾ ಮತ್ತಿತರರಿದ್ದರು.