ಕೇಂದ್ರದಿಂದ ಜಿಲ್ಲೆಗೆ ₹121 ಕೋಟಿ

Published on

ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಮಂಜೂರು

ಚಿಕ್ಕಬಳ್ಳಾಪುರ : ಜಿಲ್ಲೆಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರವು ಅಮತ್ 2 ಯೋಜನೆಯಡಿ 121 ಕೋಟಿ ರೂ. ಮಂಜೂರು ಮಾಡಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಹೌಸಿಂಗ್ ಚೇಂಬರ್ ನಿರ್ವಾಣ, ಕೆರೆಗಳ ಸಾಮರ್ಥ್ಯ ಹೆಚ್ಚಳ ಸೇರಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು ಶಿಡ್ಲಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 4.8 ಕೋಟಿ ರೂ. ವೆಚ್ಚದಲ್ಲಿ 11 ಉದ್ಯಾನಗಳನ್ನು ಅಭಿವದ್ಧಿಪಡಿಸಲಾಗುತ್ತಿದೆ. ಇದರಿಂದ ವಾಯುವಿಹಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಂತಹ ಮಹತ್ವಾಕಾಂಕ್ಷಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಏನೇನು ಅಭಿವೃದ್ಧಿ?
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 2.4 ಕೋಟಿ ರೂ. ವೆಚ್ಚದಲ್ಲಿ 6 ಕೆರೆಗಳು ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ 4 ಉದ್ಯಾನಗಳು, ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 1 ಕೆರೆ ಹಾಗೂ 3 ಕೋಟಿ ರೂ ವೆಚ್ಚದಲ್ಲಿ 5 ಉದ್ಯಾನ, ಶಿಡ್ಲಟ್ಟ ನಗರಸಭೆ ವ್ಯಾಪ್ತಿಯಲ್ಲಿ 8.8 ಕೋಟಿ ರೂ. ವೆಚ್ಚದಲ್ಲಿ 1 ಕೆರೆ ಹಾಗೂ 1.2 ಕೋಟಿ ರೂ. ವೆಚ್ಚದಲ್ಲಿ 2 ಉದ್ಯಾನ ಸೇರಿದಂತೆ ಅಮತ್ 2 ಯೋಜನೆಯಡಿ 23.2 ಕೋಟಿ ರೂ ವೆಚ್ಚದಲ್ಲಿ 8 ಜಲಮೂಲಗಳ ಪುನರುಜ್ಜೀವನ ಮತ್ತು 4.8 ಕೋಟಿ ರೂ ವೆಚ್ಚದಲ್ಲಿ 11 ಉದ್ಯಾನಗಳ ಪುನಶ್ಚೇತನ ಕೈಗೊಳ್ಳಲಾಗುತ್ತಿದೆ ಎಂದು ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಜಲಸಂಗ್ರಹಾಗಾರಗಳ ಅಭಿವೃದ್ಧಿ
ಚಿಕ್ಕಬಳ್ಳಾಪುರದ ಜಕ್ಕಲಮಡು ಜಲಾಶಯದ ಜಲಸಂಗ್ರಹಾಗಾರಗಳ ದುರಸ್ತಿ ಹಾಗೂ ಆನ್‌ಲೈನ್ ವ್ಯವಸ್ಥೆ ಪ್ರಕ್ರಿಯೆ ನಿರ್ವಹಣೆಯಾಗುತ್ತಿದ್ದು ಈ ಸಂಗ್ರಹಾಗಾರಗಳಿಂದ 3,250 ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ (35.50 ಕಿ.ಮೀ.ವಿತರಣಾ ಜಾಲ), ಚಿಂತಾಮಣಿಯ ಭಕ್ತರಹಳ್ಳಿ ಅರಸೀಕೆರೆಯಲ್ಲಿ ಜಲಸಂಗ್ರಹಾಗಾರದಿಂದ 3,500 ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದು ಎರಡು ಶುದ್ಧೀಕರಣ ಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಬಾಗೇಪಲ್ಲಿಯಲ್ಲಿ ಚಿತ್ರಾವತಿ ಜಲಾಶಯದ ಸಂಗ್ರಹಾಗಾರ ದುರಸ್ತಿಗೊಳಿಸುತ್ತಿದ್ದು ಇಲ್ಲಿಂದ 1,200 ಮನೆಗಳಿಗೆ ನೀರು ಸರಬರಾಜಾಗುತ್ತಿದೆ (11.80 ಕಿ.ಮೀ. ವಿತರಣಾ ಜಾಲ), ಗುಡಿಬಂಡೆಯಲ್ಲಿ ಅವಾನಿ ಭೈರಸಾಗರ ಕೆರೆಯ ಶುದ್ಧೀಕರಣ ಟಕದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸುವ ಹಾಗೂ ಹೌಸಿಂಗ್ ಚೇಂಬರ್ ನಿರ್ವಾಣ ಕಾಮಗಾರಿ ನಡೆಯುತ್ತಿದ್ದು ಇಲ್ಲಿ 2,500 ಗಹ ಸಂಪರ್ಕವಿದ್ದು (32.72 ಕಿ.ಮೀ. ವಿತರಣಾ ಜಾಲ), ಗೌರಿಬಿದನೂರು ನಗರ ಹಾಗೂ 8 ಹಳ್ಳಿಗಳಿಗೆ ಸಂಬಂಧಿಸಿದಂತೆ ವಾಟದಹೊಸಹಳ್ಳಿ ಕೆರೆಯ ಜಲಸಂಗ್ರಹಾಗಾರಗಳ ದುರಸ್ತಿ, ವಿದ್ಯುತ್ ಪಂಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಇದರ ಜತೆಗೆ ಹೌಸಿಂಗ್ ಚೇಂಬರ್ ನಿರ್ವಾಣವಾಗಲಿದೆ. ಚಿಂತಾಮಣಿಯಲ್ಲಿ ನೆಕ್ಕುಂದಿ ಕೆರೆಯ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಶಿಡ್ಲಟ್ಟ ಹಾಗೂ 13 ಹಳ್ಳಿಗಳಿಗೆ ಸಂಬಂಧಿಸಿದಂತೆ, ರಾಮಸಮುದ್ರ ಕೆರೆಯಿಂದ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net