ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವರ್ಷದಲ್ಲಿ 1203 ಹೆರಿಗೆ ಸಾಧನೆ

raichur
raichur
Published on

ರಾಯಚೂರು ನಗರದ ತಾಯಿ ಮಕ್ಕಳ ಆಸ್ಪತ್ರೆಯು ಕಳೆದ ಒಂದು ವರ್ಷದಲ್ಲಿ ಸುಮಾರು 1203 ಹೆರಿಗೆ ಕಾರ್ಯವನ್ನು ನಿರ್ವಹಿಸಿದ ಕೀರ್ತಿಗೆ ಪಾತ್ರವಾಗಿದೆ.

ನಗರದಲ್ಲಿ 2024 ರ ಆಗಸ್ಟ್ 15 ರಂದು ಆರಂಭವಾದ ಈ ತಾಯಿ ಮಕ್ಕಳ ಆಸ್ಪತ್ರೆಯು ಸುಸಜ್ಜಿತ ಹೆರಿಗೆ ಕೊಠಡಿ, ಅತ್ಯಾಧುನಿಕ ಉಪಕರಣಗಳು, ನುರಿತ ವೈದ್ಯರನ್ನು ಹೊಂದುವ ಮೂಲಕ ಸರ್ಕಾರದ ಆಶಯದಂತೆ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದು, ಆಸ್ಪತ್ರೆಯಲ್ಲಿ ಇದುವರೆಗೆ 681 ಸಹಜ ಹೆರಿಗೆಗಳು ಮತ್ತು 522 ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಗಳು ಸೇರಿ ಒಟ್ಟು 1203 ಹೆರಿಗೆಗಳನ್ನು ನಿರ್ವಹಿಸಲಾಗಿದೆ.

225 ಗಂಡಾಂತರ ಗರ್ಭಿಣಿಯರ ಹೆರಿಗೆ

ಹೆರಿಗೆ ಸಮಯದಲ್ಲಿ ತಾಯಿಯ ಜೀವಕ್ಕೆ ಅಪಾಯಕಾರಿಯಾಗುವ ಗಂಡಾಅತರ ಗರ್ಭಿಣಿ ಎಂದು ಹೇಳಲಾಗುವ ಚೊಚ್ಚಲು ಗರ್ಭಿಣಿ, 145 ಸೇಂಟಿ ಮೀಟರ್‌ಗಿಂತ ಕಡಿಮೆ ಎತ್ತರ, ಅಧಿಕ ರಕ್ತದೊತ್ತಡ, ಅವಳಿ ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವ, ಮೊದಲ ಹೆರಿಗೆ ಸಿಸೇರಿಯನ್ ಆಗಿರುವ ಮುಂತಾದ ಕಾರಣಗಳ ಹೆರಿಗೆ ಅಪಾಯಕಾರಿಯಾಗಿರುವ 225 ಗರ್ಭಿಣಿಯರ ಹೆರಿಗೆ ಮಾಡಲಾಗಿದೆ.

ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ತಜ್ಞ ವೈದ್ಯರು, ಸ್ನಾತ್ತಕೋತ್ತರ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆಗೆ ನಿರಂತರವಾಗಿ ಸಹಕರಿಸುತ್ತಿರುವುದರಿಂದ ಈ ಸಾಧನೆ ಮಾಡಲು ಸಹಕಾರಿಯಾಗಿದೆ.ಪ್ರಸ್ತುತ 4 ಪ್ರಸೂತಿ ತಜ್ಞರು, 3 ಮಕ್ಕಳ ತಜ್ಞರು, ಸೇರಿದಂತೆ ರೆಡಿಯಾಲಜಿಸ್ಟ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಡಾ ಪ್ರಜ್ವಲ್‌ಕುಮಾರ THO ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net