1200ಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ವಿತರಣೆ

shriram finance
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಶ್ರೀರಾಮ ಫೈನಾನ್ಸ್ ಲಿಮಿಟೆಡ್ ವತಿಯಿಂದ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶನಿವಾರ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಧಾರವಾಡದ ಶ್ರೀ ಡಾ. ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಂಸ್ಕಾರವಂತರಾಗಬೇಕು. ನೌಕರಿಗಾಗಿ ಕಾಯದೇ ಉದ್ಯಮ ಸ್ಥಾಪನೆ ಮಾಡಿ ಸ್ವಾವಲಂಬಿಯಾಗಿ ಬದುಕಬೇಕು. ವಿದ್ಯಾರ್ಥಿ ವೇತನವನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಹೊಂದಬೇಕು ಎಂದರು.

ಶ್ರೀರಾಮ ಫೈನಾನ್ಸ್ ಲಿಮಿಟೆಡ್​ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ ಮಠ ಅವರು ಸಂಸ್ಥೆಯ ಬೆಳವಣಿಗೆ ಹಾಗೂ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.

ವಿಶಾಲ ಅಬ್ಬಯ್ಯ, ರಾಮಲಿಂಗೇಗೌಡ, ಶಿವಾನಂದ ಸವದತ್ತಿ, ವಾದಿರಾಜ ಸಿ., ಜುಲ್ಪಿ ಬಳಿಗಾರ, ಪದ್ಮರಾಜ, ರಾಮಚಂದ್ರ, ನಾಗರಾಜ ಸಿ., ಪ್ರಕಾಶ ಮೇಟಿ, ಪ್ರಶಾಂತ ಸಕ್ರೆಣ್ಣನವರ, ಗೋಪಾಲ ಹರ್ಲಾಪುರ, ರಾಜು ಜಂಗಮಗೌಡರ, ಅಧಿಕಾರಿಗಳು ಭಾಗವಹಿಸಿದ್ದರು. ಪ್ರಕಾಶ ಪದಕಿ ಹಾಗೂ ರಾಜಶೇಖರ ಪಲ್ಲಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net