

ವಿಜಯಪುರ;ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರತಿಷ್ಠಿತ ಟೊಯೊಟಾ ಕಿಲೋರ್ಸ್ಕರ್ ಸಂಸ್ಥೆ ಹಮ್ಮಿಕೊಂಡಿದ್ದ ನೇರ ಸಂದರ್ಶನ ಉದ್ಯೋಗಮೇಳದಲ್ಲಿ 120 ಯುವಕರು ಆಯ್ಕೆಯಾಗಿದ್ದಾರೆ.ಅ. 9 ರಂದು ನಡೆದ ಸಂದರ್ಶನದಲ್ಲಿ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಿಲೋರ್ಸ್ಕರ್ ಸಂಸ್ಥೆ ವತಿಯಿಂದ ಎಚ್ಆರ್ ಅಭಿಷೇಕ ಮತ್ತು ಹಿರಿಯ ತರಬೇತಿ ಅಧಿಕಾರಿಗಳು ವಿದ್ಯಾರ್ಥಿಗಳ ಸಂದರ್ಶನ ನಡೆಸಿದರು. ಸಂದರ್ಶನದಲ್ಲಿ ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಭಾಗವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಕಳಸಗೊಂಡ, ಪ್ಲೆಸಮೆಂಟ್ ಅಧಿಕಾರಿ ಸುಧನ್ವ ಕುಲಕರ್ಣಿ, ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ, ಐ.ಎಫ್. ಪಾಟೀಲ, ಎಂ.ಸಿ. ಬಿರಾದಾರ ಇತರರಿದ್ದರು.ನೇರ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಟೊಯೊಟಾ ಕಿಲೋರ್ಸ್ಕರ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ನೇರ ಸಂದರ್ಶನ ಉದ್ಯೋಗ ಮೇಳದಲ್ಲಿ 120 ವಿದ್ಯಾರ್ಥಿಗಳು ಆಯ್ಕೆಯಾದರು. ಅಭಿಷೇಕ, ಪ್ರಭುದೇವ ಕಳಸಗೊಂಡ, ಸುಧನ್ವ ಕುಲಕರ್ಣಿ ಮತ್ತಿತರರಿದ್ದರು.