120 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಇಂದು

12 SANDOOR 041
ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಬಿಕೆಜಿ ಸಂಸ್ಥೆಯ ಪಾಲುದಾರ ಬಿ.ನಾಗನಗೌಡ, ಸರ್ಕಾರಿ ಆಸ್ಪತ್ರೆ ವೈದ್ಯ ಪವನಕುಮಾರ್, ಬಿಕೆಜಿ ಸಂಸ್ಥೆಯ ಅಧಿಕಾರಿಗಳಾದ ಪ್ರಮೋದ್ ರಿತ್ತಿ, ರಾಜಶೇಖರ್ ಬೆಲ್ಲದ್ ಇತರರಿದ್ದರು.
Published on

ಸಂಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಕುಮಾರಗೌಡ ಅವರ 15ನೇ ಪುಣ್ಯಸ್ಮರಣೆ ನಿಮಿತ್ತ ಬಿಕೆಜಿ ಫೌಂಡೇಷನ್ ಹಾಗೂ ಬಳ್ಳಾರಿಯ ಅಂಧತ್ವ ನಿವಾರಣಾ ಸಂಸ್ಥೆ ಸಹಯೋಗದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಬಿಕೆಜಿ ಸಂಸ್ಥೆಯ ಪಾಲುದಾರ ಬಿ.ನಾಗನಗೌಡ ಮಾತನಾಡಿ, ಬಿಕೆಜಿ ಸಿಬ್ಬಂದಿ ಸೇರಿ 65ಜನ ರಕ್ತದಾನ ಮಾಡಿದ್ದಾರೆ. ಡಿ.13ರಂದು ನೇತ್ರ ಶಸ್ತ್ರಚಿಕಿತ್ಸೆ , ಡಿ.14ರಂದು ಸಮಾರೋಪ ಸಮಾರಂಭ ನಡೆಯಲಿದೆ. ಕೊಂಡ್ಲಹಳ್ಳಿಯ ಎಂಆರ್‌ಟಿ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ಎನ್.ವಿಜಯ ನಾಗರಾಜ ನೇತ್ರ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಒಟ್ಟು 120 ಜನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯ ಪವನಕುಮಾರ್, ಬಿಕೆಜಿ ಸಂಸ್ಥೆ ಅಧಿಕಾರಿಗಳಾದ ಪ್ರಮೋದ್ ರಿತ್ತಿ, ರಾಜಶೇಖರ್ ಬೆಲ್ಲದ್, ಸತ್ಯನಾರಾಯಣ, ಗಿರೀಶ್, ಅಜಯ್, ಗೋಪಾಲ್, ವೆಂಕಟಸುಬ್ಬಯ್ಯ, ಗಿರೀಶ್, ಜಾತಪ್ಪ, ಗೋಪಾಲ್, ಸುಬ್ರಹ್ಮಣ್ಯ, ಸಿದ್ದಪ್ಪ ಹಾಗೂ ವೆಂಕಟಸುಬ್ಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net