12 ನಿರ್ದೇಶಕ ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲು

04-GPT-4
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ.

ಇತ್ತೀಚೆಗೆ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ತ್ರಿಯಂಭಕಪುರ ನಾಗಶೆಟ್ಟಿ ಅವಿರೋಧವಾಗಿ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ರಾಮಪ್ಪ ಲಾಟರಿಯಲ್ಲಿ ಆಯ್ಕೆಯಾದರು. ಇನ್ನುಳಿದ 10 ಸ್ಥಾನಗಳಿಗೆ ಟಿ.ಸಿ.ಪುಟ್ಟನಾಯ್ಕ, ಸಿ.ಪ್ರೇಮಾ, ಕೆ.ಮಹದೇವಪ್ಪ, ಕೆ.ಎನ್.ಮಾದಪ್ಪ, ಕೆ.ಪಿ.ರಾಜಪ್ಪ, ಶಿವಯ್ಯ, ಎಂ.ಶಿವಕುಮಾರ್, ಡಿ.ಎಸ್.ಶಿವಸ್ವಾಮಿ, ಶಂಕರಮ್ಮ, ಡಿ.ಎಸ್.ಸಿದ್ದಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಹೇಮಂತ ಕುಮಾರ್ ಪ್ರಕಟಿಸಿದರು. ಎಪಿಎಂಸಿ ನಿರ್ದೇಶಕ ಪಿ.ಮಹದೇವಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net