

ದಾವಣಗೆರೆ:ಎರಡು ದಶಕದಿಂದಲೂ ಸಮಸ್ಯೆಯಾಗಿದ್ದ ಅಶೋಕ ರಸ್ತೆಯ ರೈಲ್ವೆ ಕ್ರಾಸಿಂಗ್‌ನ ಸಮಸ್ಯೆಗೆ ಭಾನುವಾರ ಉತ್ತರ ದೊರೆತಿದೆ. ಲಿಂಗೇಶ್ವರ ದೇವಸ್ಥಾನ ಎದುರಿನಿಂದ ಅಶೋಕ ಥಿಯೇಟರ್ ಪಕ್ಕದ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾರ್ಯ ಸತತ 8 ತಾಸಿನಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ 6 ಗಂಟೆಗೆ ಕಾಮಗಾರಿ ಆರಂಭವಾಗಬೇಕಿತ್ತು. ಮಳೆ ಕಾರಣಕ್ಕೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ರೈಲ್ವೆಹಳಿಗಳನ್ನು ತೆಗೆದು ಗುಂಡಿ ಅಗೆಯಲಾಯಿತು. ಕೆಳಭಾಗದಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ ಕಾಂಕ್ರೀಟ್ ಚೌಕಟ್ಟುಗಳನ್ನು ಅಳವಡಿಸಲಾಯಿತು. ಮೊದಲಿನಂತೆ ಹಳಿಗಳನ್ನು ಜೋಡಿಸಲಾಯಿತು.