12 ಜೂಜುಕೋರರ ಬಂಧನ

gambling
Published on

ಚಿತ್ರದುರ್ಗ:ತುರುವನೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಂಗಳವಾರ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ 12 ಜೂಜುಕೋರರನ್ನು ಬಂಧಿಸಿ,ಅವರಿಂದ 92 ಸಾವಿರ ರೂ.ನಗದು,10 ಮೊಬೈಲ್ ಹಾಗೂ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಟ್ಟ ಬಳಿಯ ಜೂಜುಅಡ್ಡೆ ಮೇಲೆ ದಾಳಿ ನಡೆಸಿ,ಏಳು ಜೂಜುಕೋರರನ್ನು ಬಂಧಿಸಿ,52 ಸಾವಿರ ರೂ.ನಗದು,5 ಬೈಕ್,5 ಮೊಬೈ ಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಗೊಂಡನಹಳ್ಳಿ ಸಮೀಪ ನಡೆಸಿದ ದಾಳಿಯಲ್ಲಿ ಐವರನ್ನು ಬಂಧಿಸಿ,40 ಸಾವಿರ ರೂ.ನಗದು,5 ಬೈಕ್ ಮ ತ್ತು 5 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತುರುವನೂರು ಠಾಣೆ ಪಿಐ ಬಿ.ಕೆ.ಲತಾ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net