

ನಾಪೋಕ್ಲು: ಬಿ. ಶೆಟ್ಟಿಗೇರಿ ಗ್ರಾಮದ ಚೇರಂಡ ರಕ್ಷಿತ ದೇವಯ್ಯ ಅವರ ಮನೆಯ ಬಳಿ ಅಡ್ಡಾಡುತ್ತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಖ್ಯಾತ ಉರಗತಜ್ಞ ಪೊನ್ನೀರ ಸ್ನೇಕ್ ಗಗನ್ ಸೆರೆಹಿಡಿದಿದ್ದಾರೆ. ಮನೆಯ ಸಮೀಪ ಕಾಳಿಂಗ ಸರ್ಪವು ಕೆಲವು ದಿನಗಳಿಂದ ಓಡಾಡುತ್ತಿರುವ ಬಗ್ಗೆ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಪೊನ್ನೀರ ಸ್ನೇಕ್ ಗಗನ್ ಸ್ಥಳಕ್ಕೆ ಆಗಮಿಸಿ ಸರ್ಪವನ್ನು ಸೆರೆಹಿಡಿದು, ಕುಟಿಯಲ ಅರಣ್ಯಕ್ಕೆ ಬಿಟ್ಟಿದ್ದಾರೆ. ಪೊನ್ನೀರ ಸ್ನೇಕ್ ಗಗನ್ ಈಗಾಗಲೇ 67 ಕಾಲಿಂಗ ದರ್ಪ ಸೇರಿದಂತೆ 8 ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಹಾವುಗಳನ್ನು ಸೆರೆಹಿಡಿದಿದ್ದು, ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.