ಹೆಬ್ಬಾವು ಹಿಡಿದ 7ನೇ ತರಗತಿಯ ಪೋರ

hebbavu
ಧೀರಜ್ ಐತಾಳ್ ಹೆಬ್ಬಾವು ಹಿಡಿಯುತ್ತಿರುವುದು
Published on

ಕೋಟ: ಇಲ್ಲಿನ ಸಾಲಿಗ್ರಾಮದ ನಿವಾಸಿ ಪುಟ್ಟ ಪೋರ ಧೀರಜ್ ಐತಾಳ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದಾನೆ.
ಇತ್ತೀಚೆಗೆ ಸಾಲಿಗ್ರಾಮ ಪರಿಸರದಲ್ಲಿ ಸೆರೆಸಿಕ್ಕ ಭಾರಿ ಗಾತ್ರದ ಹೆಬ್ಬಾವನ್ನು ಈ 12 ವರ್ಷದ ಪೋರ ಅದರ ತಲೆಗೆ ಕೈಹಾಕಿ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಈತ, ತಂದೆ ಸುಧೀಂದ್ರ ಐತಾಳ್ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸನಿಹದಲ್ಲಿ ವಾಸ್ತವ್ಯ ಹೊಂದಿದ್ದಾರೆ.

ತಂದೆ ಪ್ರಾಣಿ ಪ್ರೇಮಿ

ತಂದೆ ಪ್ರಾಣಿ ಪ್ರೇಮಿಯಾಗಿದ್ದು, ತನ್ನ ಮನೆಯಲ್ಲೆ ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಾನು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದ ಜತೆಗೆ ತನ್ನ ಪುತ್ರನಿಗೆ ಇದರ ಅಭಿರುಚಿ ಬೆಳೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋರನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net