

ಕೊಳ್ಳೇಗಾಲ : ಪಟ್ಟಣದ ಮೇದರ ಬೀದಿಯಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಮಂಗಳವಾರ ಪಟ್ಟಣ ಪೊಲೀಸರು ಬಂಧಿಸಿ 1.6.ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಚೇತನ್, ಮಹದೇವ, ಶಂಕರ್, ಗೋಪಿ, ನಾಗೇಶ್, ಚಲುವನಾರಾಯಣ, ಚೇತನ್, ರಾಘವೇಂದ್ರ, ಮೋಹನ್ ಕೃಷ್ಣ, ಸರಗೂರು ಅಕ್ಷಯ್ ಕುಮಾರ್, ಮಾಂಬಳ್ಳಿ ನಾಗರಾಜು ಬಂಧಿತರು. ಇವರು ಮೇದರ ಬೀದಿಯ ಸಾರ್ವಜನಿಕರ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಧಮೇರ್ಂದ್ರ ಮಾರ್ಗದರ್ಶನದಲ್ಲಿ ಪಿಎಸ್‌ಐ ವರ್ಷಾ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಎಎಸ್‌ಐ ತಖೀವುಲ್ಲಾ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಎಚ್.ಸಿ ರವಿಕುಮಾರ್, ವೆಂಕಟೇಶ್, ಕಿಶೋರ್, ಪೇದೆಗಳಾದ ಶಿವಕುಮಾರ್, ಬಿಳಿಗೌಡ, ಪಡೆಯಪ್ಪ, ಪಟ್ಟಣ ಪೊಲೀಸ್ ಠಾಣೆಯ ಸವಿರಾಜು, ಶಿವಮಂಜು, ರಾಜು, ಜಯಸೂರ್ಯ, ದೊರೆಸ್ವಾಮಿ, ಅನಿಲ್ ಕುಮಾರ್ ಇದ್ದರು.