ಜೂಜಾಡುತ್ತಿದ್ದ 12 ಜನರ ಬಂಧನ

gambling
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಇಸ್ಪೀಟ್​ ಆಡುತ್ತಿದ್ದ ಎರಡು ಅಡ್ಡೆಗಳ ಮೇಲೆ ಭಾನುವಾರ ಅಥಣಿ ಪೊಲೀಸರು ದಾಳಿ ನಡೆಸಿ 12 ಜನರನ್ನು ಬಂಧಿಸಿ 7,690 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಸತ್ತಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಬುರಾನ್​ಸಾಬ ದರ್ಗಾ ಆವರಣದಲ್ಲಿ ಜೂಜು ಆಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಅಥಣಿ ಪಿಎಸ್​ಐಗಳಾದ ಗಿರಿಮಲ್ಲಪ್ಪ ಉಪ್ಪಾರ ಮತ್ತು ಮಲ್ಲಿಕಾರ್ಜುನ ತಳವಾರ ನೇತೃತ್ವದ ಎರಡು ತಂಡಗಳು ಕಾರ್ಯಚರಣೆ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 6 ಜನರನ್ನು ಬಂಧಿಸಿ 4,030 ರೂ. ನಗದು ಹಾಗೂ ಬುರಾನ್​ಸಾಬ ದರ್ಗಾದಲ್ಲಿ ಜೂಜಾಡುತ್ತಿದ್ದ 6 ಜನರನ್ನು ಬಂಧಿಸಿ 3,660 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟು 12 ಜನರನ್ನು ಬಂಧಿಸಿ 7,690 ರೂ. ನಗದು ವಶಪಡಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಎ.ವಿ.ಗಾಯಕವಾಡ, ಶ್ರೀರಾಮ ಪೂಜಾರಿ, ಅಮೀರ್​ಖಾನ ಮೈಗೂರ, ಶ್ರೀನಾಥ ಅವಟಿ, ಪಿ.ಸಿ.ಕಂಟಿಗೊಂಡ, ಗುಂಡುರಾವ ರಾಠೋಡ ಸೇರಿ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net