ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಹು-ಧಾ ಶೂಟರ್​ಗಳಿಗೆ 12 ಪದಕ

h18-shooting hubballi
Published on


ಹುಬ್ಬಳ್ಳಿ: ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಶೂಟರ್​ಗಳು 2 ಚಿನ್ನ, 5 ಬೆಳ್ಳಿ ಹಾಗೂ 5 ಕಂಚು ಸೇರಿ 12 ಪದಕಗಳನ್ನು ಬಾಚಿಕೊಂಡಿದ್ದಾರೆ.
ತಂಡ ಸ್ಪರ್ಧೆಯ 10 ಮೀಟರ್ ಏರ್ ಪಿಸ್ತೂಲ್ ಸಬ್ ಯೂತ್ ವಿಭಾಗದಲ್ಲಿ ಐಶ್ವರ್ಯ ಬಾಲೇಹೊಸೂರ, ಕೀರ್ತಿ ಬಾಲೇಹೊಸೂರು ಹಾಗೂ ಜಿಫರ್ ಅರಳಿ ಚಿನ್ನದ ಪದಕ ಜಯಸಿದ್ದಾರೆ. 10 ಮೀ. ಏರ್ ರೈಫಲ್ ಸಬ್ ಯೂತ್ ವಿಭಾಗದಲ್ಲಿ ಶ್ರೇಯಾ ದೇಶಪಾಂಡೆ, ಸಂಜನಾ ಚಿಕ್ಕನಗೌಡರ್ ಹಾಗೂ ಅಮೃತಾ ಕಬಾಡಿ ಚಿನ್ನ ಗೆದ್ದಿದ್ದಾರೆ.
10ಮೀ. ಏರ್ ಪಿಸ್ತೂಲ್ ಸೀನಿಯರ್ ವಿಭಾಗದಲ್ಲಿ ಜಯಶ್ರೀ ಪಾಟೀಲ, ಮಮತಾ ಗೌಡ, ಪ್ರತಿಮಾ ಬಡ್ನಿ ಅವರನ್ನೊಳಗೊಂಡ ತಂಡವು ಬೆಳ್ಳಿ, ವೈಯಕ್ತಿಕ ಏರ್ ಪಿಸ್ತೂಲ್​ನಲ್ಲಿ ಜಿಫರ್ ಅರಳಿ 1 ಬೆಳ್ಳಿ ಹಾಗೂ 3ಕಂಚು, ಜಯಶ್ರೀ ಪಾಟೀಲ 1ಬೆಳ್ಳಿ, ಏರ್ ರೈಫಲ್​ನಲ್ಲಿ ರಮೇಶ ದೊಡ್ಡಮನಿ 1ಬೆಳ್ಳಿ ಹಾಗೂ 25 ಮೀ. ಸೆಂಟರ್ ಫೈರ್ ಪಿಸ್ತೂಲ್​ನಲ್ಲಿ ರವಿಚಂದ್ರ ಬಾಲೇಹೊಸೂರ ಬೆಳ್ಳಿ ಪದಕ ಜಯಿಸಿದ್ದಾರೆ.
ಸ್ಪರ್ಧೆಯ 10ಮೀ. ಏರ್ ಪಿಸ್ತೂಲ್ ಹಿರಿಯರ ವಿಭಾಗದಲ್ಲಿ ಸಿದ್ಧಾರ್ಥ ದಿವಟೆ, ಪವನ ಶರಣರ, ಸೈಯದ ಅಲಿ ಹಾಗೂ 10 ಮೀ. ಏರ್ ರೈಫಲ್ ಜೂನಿಯರ್ ವಿಭಾಗದಲ್ಲಿ ಶ್ರೇಯಾ ದೇಶಪಾಂಡೆ, ಸಂಜನಾ ಚಿಕ್ಕನಗೌಡರ ಹಾಗೂ ಅಮೃತಾ ಕಬಾಡಿ ತಂಡ ಕಂಚಿನ ಪದಕ ಗೆದ್ದಿದೆ. ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು 500 ಶೂಟರ್​ಗಳು ಪಾಲ್ಗೊಂಡಿದ್ದರು. ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವತಿಯಿಂದ 60 ಶೂಟರ್​ಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net