ಮೈಸೂರು: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉದಯಗಿರಿ ಠಾಣೆ ಪೊಲೀಸರು ಬಂದಿಸಿ 12 ಗ್ರಾಮ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.
ನಗರದ ಗೌಸಿಯಾನಗರದ ಮಹಮ್ಮದ್ ರೋಷಬ್ ಹಾಗೂ ಅಜೀಜ್‌ಸೇಠ್ ನಗರದ ತೌಸಿಫ್ ಪಾಷಾ ಬಂಧಿತರು.
ಕಲ್ಯಾಣಗಿರಿಯ ತ್ರಿವೇಣಿ ಉದ್ಯಾನದ ಬಳಿ ನ.23ರಂದು ಇಬ್ಬರು ಆರೋಪಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಂಡಿಎಂಎ ಮಾರಾಟ ಮಾಡಲು ಬಂದಿದ್ದಾಗಿ ತಿಳಿಸಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.