

ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘವು ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 96.99 ಕೋಟಿ ರೂ. ಸಾಲವನ್ನು ನೀಡಿ 2.45 ಕೋಟಿ ರೂ.ಗೂ ಮಿಕ್ಕಿ ಲಾಭ ಗಳಿಸಿದೆ ಎಂದು ಅಧ್ಯಕ್ಷ ಅಶೋಕ ಪೈ ಹೇಳಿದರು.
ಸಂಘದ 25ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದಸ್ಯರಿಗೆ ಶೇ. 12 ಲಾಭಾಂಶ ಘೋಷಿಸಿದರು. ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ 13 ವಷರ್ಗಳಿಂದ ಸಂಘವು ಅ ದರ್ಜೆ ಪಡೆದಿದೆ. ಶಿರಸಿಯ ಶ್ರೀ ಮಾರಿಕಾಂಬಾ ವಿವಿಧೋದ್ದೇಶಗಳ ಸಹಕಾರ ಸಂಘವು ನಮ್ಮ ಸಂಘದೊಂದಿಗೆ ವಿಲೀನಗೊಂಡಿದೆ ಎಂದರು.
ಸಂಘದ ನಿರ್ದೇಶಕ ರವೀಂದ್ರ ಪ್ರಭು ಮಾತನಾಡಿ, ಶಿರಾಲಿಯಲ್ಲಿ ಸಂಘದ ಸ್ವಂತ ಕಟ್ಟಡವು ಅತಿ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.
ನರೇಂದ್ರ ನಾಯಕ, ಸದಸ್ಯರಾದ ಎ. ಎಂ. ಮುಲ್ಲಾ, ರಾಮದಾಸ ಮಹಾಲೆ, ವೆಂಕಟೇಶ ನಾಯ್ಕ, ಮಂಜುನಾಥ ಪ್ರಭು, ಶ್ರೀನಿವಾಸ ಮಹಾಲೆ, ಬೇತಾಳ ಮಹಾಲೆ, ವೆಂಕಟ್ ಭಟ್ಟ ಇತರರು ಮಾತನಾಡಿದರು. ಪ್ರತಿಭಾವಂತ 31 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಸಂಘದ ಮುಖ್ಯ ಕಾರ್ಯ ನಿರ್ವಾಹಕ ರಾಜೇಂದ್ರ ಶಾನಭಾಗ ವರದಿ ವಾಚಿಸಿದರು. ಸಭೆಯ ಪ್ರಾರಂಭದಲಿ ್ಲ ದಿ. ಸುಬ್ರಾಯ ಕಾಮತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿರ್ದೇಶಕ ವಾಮನ ಕಾಮತ ವಂದಿಸಿದರು. ಶ್ಯಾಮಸುಂದರ್ ಪ್ರಭು, ಭಟ್ಕಳ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ನಿರ್ವಹಿಸಿದರು.