ಕೆ.ಆರ್.ನಗರ: ಪಟ್ಟಣದ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ 5 ವರ್ಷಗಳ ಅಧಿಕಾರ ಅವಧಿಗೆ 12 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ರವಿ ಘೋಷಿಸಿದ್ದಾರೆ.
ಫೆ.9ರಂದು ನಿಗದಿಯಾಗಿದ್ದ 13 ನಿರ್ದೇಶಕರ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ 12 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾದ್ದು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸ್ಥಾನಕ್ಕೆ ಅಭ್ಯರ್ಥಿಗಳು ಯಾರೂ ಇಲ್ಲದ ಕಾರಣಕ್ಕೆ ಖಾಲಿ ಉಳಿದಿದೆ.
ಸುಭಾಷ್, ಎನ್.ಎಂ. ಪ್ರಕಾಶ, ವೈ.ಆರ್.ಶಿವಕುಮಾರ್, ಕೆ.ಸಿ. ನಾಗರಾಜು, ಸೈಯದ್ ಅಸ್ಲಂ, ಕೆ.ಎನ್. ಶಂಕರ, ಅವಿನಾಶ್ ಪಿ. ಪಟೇಲ್, ಸಿ.ಎಂ. ಶಶಿಕಲಾ, ಕೆ.ಸಿ.ಶಿಲ್ಪಾ, ಕೆ.ಎಲ್.ರಾಜೇಶ್, ಮೋಹನ್ ರಾವ್, ಎಂ.ಎ.ರವೀಂದ್ರಕುಮಾರ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.