

ಆನೇಕಲ್: ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಮೀದುಲ್ಲಾ ಖಾನ್ ತಿಳಿಸಿದ್ದಾರೆ.
ವಿ.ಎಚ್.ಸೋಮಶೇಖರ್‌ರೆಡ್ಡಿ, ಎಂ.ನಾರಾಯಣ ಸ್ವಾಮಿ, ಎಂ.ನವೀನ್‌ಕುಮಾರ್, ಆರ್, ಮಂಜುನಾಥ್, ಎನ್,ವೆಂಕಟೇಶ್, ಪಿ.ರಾಜು ಸಾಮಾನ್ಯ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಹಿಂದುಳಿದ ವರ್ಗದಿಂದ ಎಂ.ಶ್ರೀನಿವಾಸ್, ಎಂ.ತಿಲಕ್‌ಕುಮಾರ್ ಗೆಲುವು ಸಾಧಿಸಿದ್ದಾರೆ. ಪ.ಜಾತಿ ಮೀಸಲು ಸ್ಥಾನದಿಂದ ಎಂ.ರಾಜಪ್ಪ ಹಾಗೂ ಪರಿಶಿಷ್ಟ ಪಂಗಡದಿಂದ ಸತ್ಯನಾರಾಯಣ್, ಮಹಿಳಾ ಮೀಸಲು ಸ್ಥಾನದಿಂದ ಮಂಜುಳಾ ಮತ್ತು ಶೋಭಾ ಜಯಗಳಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ತಾಲೂಕಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ ಪರಿಣಾಮ ಎಲ್ಲ ವ್ಯವಸೇವಾ ಸಂಘದ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.
ನೂತನ ನಿರ್ದೇಶಕ ತಿಲಕ್‌ಗೌಡ ಮಾತನಾಡಿ, ಸಂಘದ ಸದಸ್ಯರ ಹಾಗೂ ಬಿಜೆಪಿ ಮುಖಂಡರು ಬೆಂಬಲದಿಂದ ನಿರ್ದೇಶಕರಾಗಿ ಗೆಲುವು ಸಾಧಿಸಿದ್ದೇವೆ. ಸರ್ಕಾರದಿಂದ ದೊರೆಯುವಂತಹ ಯೋಜನೆಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲು ಕಾರ್ಯನಿರ್ವಹಿಸಿ ಸಹಕಾರ ಸಂಘಕ್ಕೆ ಒಳ್ಳೆಯ ಹೆಸರನ್ನು ತಂದುಕೊಡಲು ಶ್ರಮಿಸಲಾಗುವುದು ಎಂದರು. ಮುಖಂಡರಾದ ನಾಗೇಶ್, ಎಸ್.ಎಂ.ಮಧು, ಕೆ.ನಾಗರಾಜು, ಮರಸೂರು ಅನಿಲ್‌ರೆಡ್ಡಿ, ಸದಾನಂದರೆಡ್ಡಿ ಇದ್ದರು.
ಆನೇಕಲ್ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಬಿಜೆಪಿ ಬೆಂಬಲಿತ ನಿರ್ದೇಶಕರನ್ನು ಬೆಂಬಲಿಗರು ಸನ್ಮಾನಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು ಗೌಡ, ನರಸಿಂಹ ರೆಡ್ಡಿ, ಜೆ.ನಾರಾಯಣಪ್ಪ, ದೊಡ್ಡಹಾಗಡೆ ಎನ್.ಶಂಕರ್, ಬಿ.ಜಿ.ಆಂಜಿನಪ್ಪ, ಬಿ.ನಾಗರಾಜು ಇದ್ದರು.