ಕೋಡಿ ಬಿದ್ದ ನರಗಿನ ಕೆರೆ

mkg1b
Published on

ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಳಗುತ್ತಿ ಸಮೀಪದ ನರಗಿನ ಕೆರೆ ತುಂಬಿ ಕೋಡಿ ಬಿದ್ದಿದೆ.

ತಾಲೂಕಿನ ಬೆಳಗುತ್ತಿ ಗ್ರಾಮದ ಸಮೀಪದ ಗುಡ್ಡದಂಚಿನ 12 ಎಕರೆ ವಿಸ್ತೀರ್ಣದ ನರಗಿನ ಕೆರೆ ತುಂಬಿದ ಹಿನ್ನೆಲೆ ಗ್ರಾಮಸ್ಥರು ಕೆರೆ ಕೋಡಿ ಬಿದ್ದಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಶಾಸಕರು ಕೆರೆಗೆ ಬಾಗಿನ ಸಲ್ಲಿಸುವಂತೆ ವಿಡಿಯೋ ಮೂಲಕ ಆಹ್ವಾನ ನೀಡಿದ್ದಾರೆ.

ಶನಿವಾರ ತಾಲೂಕಿನ ಬೆಳಗುತ್ತಿಯಲ್ಲಿ 29.6.ಮಿ.ಮೀ, ಸವಳಂಗ 6.8.ಮಿ.ಮೀ., ಗೋವಿನಕೋವಿ 14.6.ಮಿಮೀ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net