ಆರೋಗ್ಯ ವಲಯಕ್ಕೆ ಶೇ.12.96 ಅಧಿಕ ಅನುದಾನ

Health Sector
Published on

ಬೆಂಗಳೂರು: ಜನರ ಆರೋಗ್ಯಕ್ಕಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 90 ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನ ೋಷಿಸಿದ್ದು, ಇದು ಕಳೆದ ಬಜೆಟ್ (2023-24)ಗಿಂತ ಶೇ. 12.96 ಕೋಟಿ ರೂ. ಹೆಚ್ಚಳವಾಗಿದೆ.

ಲೋಕಸಭೆಯಲ್ಲಿ ಮಂಗಳವಾರ 2024-25ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿ ಆಯುಷ್ ಸಚಿವಾಲಯಕ್ಕೆ 3 ಸಾವಿರ ಕೋಟಿ ರೂ.ಗಳಿಂದ 3,712.49 ಕೋಟಿ ರೂ.ಗೆ ಅನುದಾನ ಹೆಚ್ಚಿಸಲಾಗಿದೆ. ಆರೋಗ್ಯ ವಲಯಕ್ಕೆ ನೀಡಿರುವ 90,958.63 ಕೋಟಿ ರೂ. ಮೊತ್ತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 87,656.90 ಕೋಟಿ ಹಾಗೂ ಆರೋಗ್ಯ ಸಂಶೋಧನಾ ಇಲಾಖೆಗೆ 3,301.73 ಕೋಟಿ ರೂ. ಮೀಸಲಿಡಲಾಗಿದೆ. ಇದರೊಂದಿಗೆ ಆರೋಗ್ಯ ಇಲಾಖೆ ಯೋಜನೆಗಳಿಗೆ 77,624.79 ಕೋಟಿಯಿಂದ 87,656.90 ಕೋಟಿ ರೂಪಾಯಿಗೆ ಅನುದಾನ ಹೆಚ್ಚಿಸಲಾಗಿದೆ ಎಂದರು.

ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ 2023-24ರಲ್ಲಿ ನೀಡಲಾಗಿದ್ದ 31,550.87 ಕೋಟಿ ರೂ.ಗಳಿಂದ 2024-25ರಲ್ಲಿ 36,000 ಕೋಟಿ ರೂ.ಗಳಿಗೆ ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ (ಪಿಎಂ-ಜೆಎವೈ) 6,800 ಕೋಟಿಯಿಂದ 7,300 ಕೋಟಿ ರೂಪಾಯಿಗೆ ಹಾಗೂ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮಕ್ಕೆ 65 ಕೋಟಿಯಿಂದ 90 ಕೋಟಿ ರೂಪಾಯಿಗೆ ಅನುದಾನ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್‌ಗೆ 200 ಕೋಟಿ ರೂ. ಸ್ವಾಯತ್ತ ಸಂಸ್ಥೆಗಳಿಗೆ 18,013.62 ನೀಡಲಾಗಿದ್ದು, ಈ ಸಂಸ್ಥೆಗಳಲ್ಲಿ, ನವದೆಹಲಿಯ ಏಮ್ಸ್‌ಗೆ 4,523 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇಂಡಿಯನ್ ಕೌನ್ಸಿಲ್ ಆ್ ಮೆಡಿಕಲ್ ರಿಸರ್ಚ್‌ಗೆ 2,732.13 ಕೋಟಿ ನೀಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net