12.93 ಲಕ್ಷ ರೂ. ಮೌಲ್ಯದ ಗಾಂಜಾ ವಶ

ganja
Published on

ಹುಬ್ಬಳ್ಳಿ: ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಇಳಿದು ನಗರದ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪಾದವಾಗಿ ಹೊರಟಿದ್ದ ವ್ಯಕ್ತಿಯ ತಪಾಸಣೆ ವೇಳೆ 12.93 ಲಕ್ಷ ರೂ. ಮೌಲ್ಯದ 1 ಬಂಡಲ್ ಗಾಂಜಾ ಪ್ಯಾಕೆಟ್‌ಗಳು ಲಭಿಸಿವೆ.
ರಫೀಕ್‌ಉಲ್ಲಾ ಎಂಬಾತ ಟ್ರಾೃಲಿ ಬ್ಯಾಗ್‌ನೊಂದಿಗೆ ಹೊರಟಿದ್ದ. ಇದನ್ನು ಸ್ಥಳೀಯ ಪೊಲೀಸರು ಗಮನಿಸಿದ್ದರು. ಆಗ ವಿಚಾರಿಸಿದಾಗ ರಫೀಕ್ ಬ್ಯಾಗ್‌ನಲ್ಲಿ ಏನಿಲ್ಲ ಎಂದಿದ್ದಾನೆ. ಕೂಡಲೇ ಪಂಚರ ಮುಂದೆ ತಪಾಸಣೆ ನಡೆಸಿದಾಗ ಬ್ಯಾಗ್‌ನಲ್ಲಿ ಖಾಕಿ ಬಣ್ಣದ ಟೇಪ್ ಸುತ್ತಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಹೂವು ಮತ್ತು ಎಲೆಗಳಿಂದ ಕೂಡಿದ ಘಾಟ್ ವಾಸನೆಯುಳ್ಳ ಮಾದಕ ವಸ್ತು ಸಿಕ್ಕಿವೆ. ಒಟ್ಟು 12ಕೆಜಿ 935 ಗ್ರಾಂ ತೂಕದ ಗಾಂಜಾ ಇದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಎಸ್.ವೈ. ಮಾರಡಿ ಎಂಬುವವರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net