

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೨.೭೬ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩೨.೪೮ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೫.೮೦ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧೧.೧೦ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೭.೪೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೭ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೪೧.೫೦, ನಾಪೋಕ್ಲು ೧೧.೪೦, ಸಂಪಾಜೆ ೩೧, ಭಾಗಮಂಡಲ ೪೬, ವಿರಾಜಪೇಟೆ ೭.೬೦, ಅಮ್ಮತ್ತಿ ೪, ಹುದಿಕೇರಿ ೧೬, ಶ್ರೀಮಂಗಲ ೧೮.೪೦, ಪೊನ್ನಂಪೇಟೆ ೫, ಬಾಳೆಲೆ ೫, ಸೋಮವಾರಪೇಟೆ ೭, ಶನಿವಾರಸಂತೆ ೨, ಶಾಂತಳ್ಳಿ ೧೮, ಕೊಡ್ಲಿಪೇಟೆ ೨.೬೦, ಕುಶಾಲನಗರ ೧, ಸುಂಟಿಕೊಪ್ಪ ೧೩ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೩.೮೨ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೫೬೭೩ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೪೦೦೦ ಕ್ಯುಸೆಕ್‌ಇದೆ.