ಸದಸ್ಯರಿಗೆ ಶೇ.12.50ಲಾಭಾಂಶ ವಿತರಣೆ

12.50% dividend distribution to members
ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಮಾತನಾಡಿದರು. ಸಂಘದ ನಿರ್ದೇಶಕರಿದ್ದರು.
Published on

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ 88.80 ಲಕ್ಷರೂ. ಲಾಭ ಹೊಂದಿದ್ದು ಸದಸ್ಯರಿಗೆ ಶೇ. 12.50ಲಾಭಾಂಶ ನೀಡಲು ನಿರ್ಣಯಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಹೇಳಿದರು.

ಸಂಘದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಸಂಘದ ಏಳಿಗೆಗೆಯ ಜತೆಗೆ ಸದಸ್ಯರ ಹಿತ ಕಾಪಾಡಲು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಪ್ರಸ್ತುತ ಅಡಕೆ ಎಲೆಚುಕ್ಕಿ ರೋಗದ ಸಮಸ್ಯೆ ಕಾಡುತ್ತಿದ್ದು, ಸದಸ್ಯರು ಇದನ್ನ ಗಂಭೀರವಾಗಿ ತೆಗದುಕೊಂಡು ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಆರ್ಥಿಕವಾಗಿ ಮಿತವ್ಯಯವನ್ನು ಸಾಧಿಸಬೇಕಾಗಿದೆ.

ಸಂಘವು 1627ಶೇರು ಸದಸ್ಯರನ್ನು ಹೊಂದಿದ್ದು, 2,87,16,385 ರೂ. ಶೇರು ಬಂಡವಾಳವಿದೆ. ಸಂಘದ ಮೂಲಕ ಸದಸ್ಯರು 6,649 ಕ್ವಿಂಟಾಲ್‌ನಷ್ಟು ಮಹಸೂಲು ವಿಕ್ರಿ ಮಾಡಿದ್ದಾರೆ ಎಂದರು.

ಸಂಘದ ಸದಸ್ಯರಿಗೆ ಈ ವರ್ಷದಿಂದ ಹೈಟೆಕ್ ದೋಟಿಯನ್ನು ಹೆಚ್ಚು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ದೋಟಿ ಸಾಲವನ್ನು 11ಸದಸ್ಯರಿಗೆ ನೀಡಲಾಗಿದೆ. ಕೃಷಿಗೆ ಬೇಕಾಗುವ ಎಲ್ಲ ಯಂತ್ರೋಪಕರಣಗಳನ್ನು ವ್ಯವಸ್ಥೆಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ಚೌಡು ಆರ್. ಗೌಡ ಬಿಳೆಕಲ್ಮನೆ, ಸದಸ್ಯರಾದ ಸುಬ್ರಾಯ ಹೆಗಡೆ ಸಾಯಿಮನೆ, ಗಣಪತಿ ಆರ್. ಹೆಗಡೆ ಹಿರೇಹದ್ದ, ಸತೀಶ ಜಿ. ಹೆಗಡೆ ಮಾಗೋಡಜಡ್ಡಿ, ಚಂದ್ರಶೇಖರ ಎಚ್. ಗೌಡ ದಿಗೋಡಿ, ಚಂದ್ರಕಾಂತ ಎಚ್. ಗೌಡ ತಾರಕಂಟ, ಮುಕ್ತಾ ಹೆಗಡೆ ಹಾಗಲಮನೆಜಡ್ಡಿ, ಪಾರ್ವತಿ ಬೀರ ಗೌಡ ಕುಳಿಕಟ್ಟು, ವಿಮಲಾ ತಿಮ್ಮ ನಾಯ್ಕ ಹೆಗ್ಗರಣಿ, ಮಂಜ ಗಣಪ ಹರಿಜನ ಹುಲ್ಲುಂಡೆ, ಶಂಕರನಾರಾಯಣ ಹೆಗಡೆ ಜೋಗಿನ್ಮನೆ, ಭಾಸ್ಕರ ಎಂ. ಹೆಗಡೆ ಬಳಸುತ್ತು ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಾಹಕ ಚಿದಂಬರ ಎಂ. ನಾಯ್ಕ ವರದಿವಾಚಿಸಿದರು. ನಂತರ ಶಿರಳಗಿಯ ಶ್ರೀಬ್ರಹ್ಮಾನಂದ ಭಾರತೀ ಸ್ವಾಮಿಗಳು ವಿಶೇಷ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net