11ರಂದು ‘ಇಲ್ಯುಮಿನೇಟ್’ ಸಂವಾದ

Published on

ಮೈಸೂರು: ಎಲ್ ಆ್ಯಂಡ್ ಟಿ ಟೆಕ್ನಾಲಜೀಸ್ ಸರ್ವೀಸಸ್, ಎನ್‌ಐಇ ಕಾಲೇಜಿನಿಂದ ಫೆ.11 ರಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ‘ಇಲ್ಯುಮಿನೇಟ್’ ಶೀರ್ಷಿಕೆಯಡಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎನ್‌ಐಇ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಗಣೇಶ್ ಪ್ರಸಾದ್ ತಿಳಿಸಿದರು.
ಮೂನ್‌ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಡಾ.ಮೈಲ್‌ಸ್ವಾಮಿ ಅಣ್ಣಾದೊರೈ, ವಂದೇ ಭಾರತ್ ಎಕ್ಸ್‌ಪ್ರೆಸ್ ಯೋಜನೆ ಹಿಂದಿನ ವಿಜ್ಞಾನಿ ಸುಧಾಂಶುರಾಣಿ ಇತರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತವನ್ನು ಜಾಗತಿಕ ಮಟ್ಟದಲ್ಲಿ ಮೇಲಕ್ಕೆ ಕೊಂಡೊಯ್ಯಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶವು ತನ್ನ ನಾಗರಿಕರ ಕಲ್ಯಾಣಕ್ಕಾಗಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿದೆ. ಇವುಗಳಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಈ ರೀತಿಯ ಪ್ರಮುಖರನ್ನು ಆಹ್ವಾನಿಸಿ ಅವರೊಡನೆ ಸಂವಾದ ನಡೆಸುವ ಅವಕಾಶ ನೀಡಿದೆ ಎಂದು ಹೇಳಿದರು.
ಸಂಘಟಕರಾದ ಶಶಿಧರ ಡೋಂಗ್ರೆ, ಅನಿರುದ್ಧ ಮಸೂದ್, ದಿವಾಕರ್, ಎಸ್.ಎ.ಗಾಯಕ್ವಾಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net