11ನೇ ಚಾತುರ್ಮಾಸ ವ್ರತ ಸಂಕಲ್ಪ ಆರಂಭ

6 KMP 02
ಶ್ರೀನಾರಾಯಣ ವಿದ್ಯಾಭಾರತಿ ಸ್ವಾಮೀಜಿ
Published on

ಕಂಪ್ಲಿ: ಸಂಕೇಶ್ವರದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠದಲ್ಲಿ ಜು.10ರಿಂದ ಸೆ.7ರತನಕ 11ನೇ ಚಾತುರ್ಮಾಸ ಆಚರಿಸುವುದಾಗಿ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ತಿಳಿಸಿದರು. ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ, ಸಂಕೇಶ್ವರ-ಕರವೀರದ ಶ್ರೀಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಆಹ್ವಾನದ ಮೇರೆಗೆ, ಗುರುಪೌರ್ಣಿಮೆ ದಿವಸ ವ್ಯಾಸ ಮಹಾಪೂಜೆ ನೆರವೇರಿಸುವ ಮೂಲಕ ಚಾತುರ್ಮಾಸ ವ್ರತ ಸಂಕಲ್ಪ ಆರಂಭಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net