

ಬೆಳಗಾವಿ: ನಗರದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಅವರ ಅಮತ ಮಹೋತ್ಸವ ಸಮಾರಂಭ ನ.11 ರಂದು ಬೆಳಗ್ಗೆ 10.30 ಗಂಟೆಗೆ ಜೆಎನ್‌ಎಂಸಿಯ ಡಾ.ಜಿ.ಎಸ್.ಜೀರಗೆ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಗದಗ ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಸಾನ್ನಿಧ್ಯವನ್ನು ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶಿವಾನಂದ ಗುರೂಜಿ, ಕಾರಂಜಿಮಠದ ಉತ್ತಾಧಿಕಾರಿ ಡಾ.ಶಿವಯೋಗಿ ದೇವರು, ರೇಣುಕಾಶ್ರಮದ ಗಂಗಾಮಾತಾಜಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ವಹಿಸುವರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನುಭಾವ ಕಾರಂಜಿ ಅಭಿನಂದನ ಸಂಪುಟ ಲೋಕಾರ್ಪಣೆಗೊಳಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅಭಯ ಪಾಟೀಲ, ಅತಿಥಿಗಳಾಗಿ ಮಾಜಿ ಶಾಸಕ ಫಿರೋಜ ಶೇಠ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಅಮತಮಹೋತ್ಸವ ಅಭಿನಂದನ ಸಂಪುಟ ಸಂಪಾದಕ ಡಾ. ಬಸವರಾಜ ಜಗಜಂಪಿ, ಪ್ರಕಾಶ ಗಿರಿಮಲ್ಲನವರ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಮಂಗಲಾ ಅಂಗಡಿ, ರಮೇಶ ಕುಡಚಿ, ಸಂಜಯ ಪಾಟೀಲ, ಅನಿಲ ಬೆನಕೆ, ಶಂಕರಗೌಡ ಪಾಟೀಲ, ಶ್ರೀಕಾಂತ ಕದಂ, ರಾಘವೇಂದ್ರ ಕಾಗವಾಡ, ಚಂದ್ರಶೇಖರ ಬೆಂಬಳಗಿ, ಪಂಚಾಕ್ಷರಿ ಚೊಣ್ಣದ, ಡಾ.ರವಿ ಪಾಟೀಲ, ಶಿವನಗೌಡ ಪಾಟೀಲ, ಎಂ.ಬಿ.ಝಿರಲಿ, ಪ್ರಕಾಶ ಬಾಳೇಕುಂದ್ರಿ, ಬಾಳಣ್ಣ ಕಗ್ಗಣಗಿ, ಗಿರೀಶ ಕತ್ತಿಶೆಟ್ಟಿ, ರತ್ನಪ್ರಭಾ ಬೆಲ್ಲದ, ಸರಳಾ ಹೆರೇಕರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.