

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಶನಿವಾರ ಯಶಸ್ವಿಯಾಗಿ ವಾರಾಂತ್ಯ ಕರ್ಫ್ಯೂ ಅಂತ್ಯವಾಗಿದ್ದು, ನಿಯಮ ಉಲ್ಲಂಘಿಸಿ ರಸ್ತೆಗಿಳಿದ 1,150 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ನಗರದಲ್ಲಿ ಕರೊನಾ ನಿಯಮ ಉಲ್ಲಂಸಿ ರಸ್ತೆಗಿಳಿದ 1,037 ದ್ವಿಚಕ್ರವಾಹನ, 45 ಆಟೋ ರಿಕ್ಷಾ, 68 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 1,150 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎನ್‌ಡಿಎಂಎ ಕಾಯ್ಡೆ ಅಡಿ ಕೇಂದ್ರ ವಿಭಾಗದಲ್ಲಿ 6, ಪಶ್ಚಿಮ ವಿಭಾಗದಲ್ಲಿ-9, ಆಗ್ನೇಯ ವಿಭಾಗದಲ್ಲಿ-8 ಸೇರಿ ಒಟ್ಟು 23 ಕೇಸ್ ದಾಖಲಾಗಿದೆ.
ಜಪ್ತಿ ಮಾಡಿದ ವಾಹನಗಳು: ಪಶ್ಚಿಮ ವಿಭಾಗ-336, ಕೇಂದ್ರ-62, ಉತ್ತರ-192, ದಕ್ಷಿಣ-40, ಪೂರ್ವ-118, ಆಗ್ನೇಯ-209, ಈಶಾನ್ಯ-129, ವೈಟ್‌ಫೀಲ್ಡ್-63 ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಜಪ್ತಿ ಮಾಡಲಾದ ವಾಹನಗಳ ಪೈಕಿ ಹೆಚ್ಚಿನವು ದ್ವಿಚಕ್ರವಾಹನಗಳಾಗಿವೆ.