ಅಯ್ಯಚಾರ ಲಿಂಗದೀಕ್ಷೆ ಸ್ವೀಕರಿಸಿದ 115 ವಟುಗಳು

115 watts received
ಲಿಂಗದೀಕ್ಷೆ ಸ್ವೀಕರಿಸಿದ ವಟುಗಳು.
Published on

ಬಾದಾಮಿ: ಸಮೀಪದ ಸುಕ್ಷೇತ್ರ ಶಿವಯೋಗಮಂದಿರದ ಮದ್ವೀರಶೈವ ಸಂಸ್ಥೆಯ 115ನೇ ಜಾತ್ರಾ ಮಹೋತ್ಸವ ಅಂಗವಾಗಿ ಶಿವಯೋಗದಂದು ಅಯ್ಯಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ಬುಧವಾರ ನಡೆಯಿತು.

ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆ, ನರಗುಂದ, ಮುದ್ದೇಬಿಹಾಳ, ವಿಜಯಪುರ, ಹುನಗುಂದ ಮತ್ತು ಬಸವನಬಾಗೇವಾಡಿ ನಗರದ ಸುಮಾರು 115 ವಟುಗಳು ಲಿಂಗದೀಕ್ಷೆ ಸ್ವೀಕರಿಸಿದರು.

ಹೆಡಗಾಪುರದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ದಾರುಕಲಿಂಗ ಶಿವಾಚಾರ್ಯರು, ಬಾದಾಮಿ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ, ಚಾಂಬೋಳದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಜೀಜಿ ಲಿಂಗದೀಕ್ಷೆ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆ ಉಪಾಧ್ಯಕ್ಷ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net