114 ಜನರಿಗೆ ಕಣ್ಣಿನ ಪರೀಕ್ಷೆ

6spt1
Published on

ಸೋಮವಾರಪೇಟೆ: ಕಿರಗಂದೂರು ಗ್ರಾಮದ ಜನತಾ ಕಾಲನಿಯ ಶ್ರೀ ಮಂಜುನಾಥ ಸ್ವಸಹಾಯ ಸಂಘದ ವತಿಯಿಂದ ಇತ್ತೀಚೆಗೆ ನೇತ್ರ ತಪಾಸಣಾ ಉಚಿತ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರಿನ ವಿಷನ್‌ಸ್ಪ್ರಿಂಗ್ ಫೌಂಡೇಷನ್ ಸಂಸ್ಥೆ ತಜ್ಞರು ನೇತ್ರ ಪರೀಕ್ಷೆ ನಡೆಸಿದರು. 114 ಜನರು ಪರೀಕ್ಷೆ ಮಾಡಿಸಿಕೊಂಡರು. 80 ಜನರಿಗೆ ಸ್ಥಳದಲ್ಲೇ ಕನ್ನಡಕ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕೂಲಿ ಕಾರ್ಮಿಕರು ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ದೃಷ್ಟಿ ಮಂಕಾದ ಸಂದರ್ಭ ಪರೀಕ್ಷೆ ಮಾಡಿಸಿಕೊಂಡು ಕನ್ನಡಕ ಹಾಕಿಕೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಎಲ್ಲ ಕಾಲನಿಗಳಲ್ಲಿ ವರ್ಷಕ್ಕೊಮ್ಮೆಯಾದರೂ ಉಚಿತ ಶಿಬಿರಗಳು ನಡೆದರೆ ಬಡವರಿಗೆ, ವೃದ್ಧರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಫೌಂಡೇಷನ್‌ನ ಸಿಬ್ಬಂದಿ ಆಶಿಶ್ ಚೌಧರಿ, ಅಮಿತ್‌ಕುಮಾರ್, ಪುಷ್ಪೇಂದ್ರ ಯಾದವ್, ಸಂಘದ ಕಾರ್ಯದರ್ಶಿ ಟಿ.ಜೆ.ಗೋಪಾಲ್, ನಾವು ಪ್ರತಿಷ್ಠಾನದ ಪಿ.ಬಿ.ಪೊನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net