

ಹೊಸಕೋಟೆ: ಹೊಸಕೋಟೆ ನಗರಸಭೆ ಚುನಾವಣೆ ಮತದಾನ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.75.76 ಮತದಾನವಾಗಿದೆ.
ಮತದಾನಕ್ಕೆ ನಗರದಲ್ಲಿ ಸ್ಥಾಪಿಸಲಾಗಿದ್ದ್ದ 47 ಮತಗಟ್ಟೆಗಳಲ್ಲಿ 35885 ಮತದಾರರು ಹಕ್ಕು ಚಲಾಯಿಸಿದ್ದು 31 ವಾರ್ಡುಗಳಿಂದ ಸ್ಪರ್ಧಿಸಿದ್ದ 114 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿತು.
ೆ.11ರಂದು ಮಂಗಳವಾರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದೀಗ ಎಲ್ಲರ ಚಿತ್ತ ಲಿತಾಂಶದತ್ತ ನೆಟ್ಟಿದ್ದು, ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಖಂಡರು, ಕಾರ್ಯಕರ್ತರು ಮುಳುಗಿದ್ದಾರೆ.
ಭಾನುವಾರ ಮುಂಜಾನೆ ಮಂದಗತಿಯಲ್ಲಿ ಶುರುವಾದ ಮತದಾನ ನಂತರ ಬಿರುಸಿನಿಂದ ಸಾಗಿತು. ಬಿಗಿ ಭದ್ರತೆಗಾಗಿ ಪ್ರತಿ ಮತಗಟ್ಟೆ ಬಳಿ ಇಬ್ಬರು ಪೊಲೀಸ್ ಪೇದೆ ನಿಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಪತ್ನಿಯೊಂದಿಗೆ ಬೆಳಗ್ಗೆ 8ಗಂಟೆಗೆ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ಬೆಳಗ್ಗೆ 10ಗಂಟೆಗೆ ಶಾಸಕ ಶರತ್ ಬಚ್ಚೇಗೌಡ ಪತ್ನಿಯೊಂದಿಗೆ ತೆರಳಿ ಮತದಾನ ಮಾಡಿದರು.
ಮತದಾನಕ್ಕೆ ತೆರಳುವ ಮತದಾರರನ್ನು ರಾಜಕೀಯ ಪಕ್ಷದ ಕಾರ್ಯಕರ್ತರು ತೆರೆಮರೆಯಲ್ಲಿ ಮತಯಾಚನೆ ಮಾಡಿ ಕೊನೇ ಹಂತದ ಪ್ರಚಾರದಲ್ಲಿ ತೊಡಗಿದ್ದರು. ಮತಗಟ್ಟೆಗಳ ಸುತ್ತಮುತ್ತಲು ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಸಂಜೆ 5ಗಂಟೆಗೆ ಮತದಾನ ಮುಗಿದು, ಶೇ.75.76 ಮತದಾನ ನಡೆದಿದೆ. ಮತಯಂತ್ರಗಳನ್ನು ನಗರದ ಜಿಜಿಎಂಎಸ್ ಶಾಲೆಯಲ್ಲಿ ಭದ್ರವಾಗಿ ಇರಿಸಲಾಗಿದೆ.
ಮತಚಲಾಯಿಸಿ ಮಾತನಾಡಿದ ಸಂಸದ ಬಿ.ಎನ್.ಬಚ್ಚೇಗೌಡ, ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆ ನಮ್ಮೆಲ್ಲರ ಹಕ್ಕಾಗಿದೆ ಎಂದರು. ಮಗನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು, ಶರತ್ ವಿದ್ಯಾವಂತ, ಬುದ್ಧಿವಂತ ಜನನಾಯಕ ಎಂದು ಜನ ತೀರ್ಮಾನ ಮಾಡಿ ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆ ಸಾಮರ್ಥ್ಯ ಇರುವುದರಿಂದ ಮುಂದಿನ ದಾರಿ ಅವರೇ ಕಂಡುಕೊಳ್ಳುತ್ತಾರೆ ಎಂದು ಉತ್ತರಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಗರಸಭೆಗೆ 31 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೇನೆ. ಮತದಾರರಿಂದ ಉತ್ತಮ ಸಹಕಾರ ದೊರೆತಿದ್ದು, ಲಿತಾಂಶ ೆ.11ಕ್ಕೆ ಹೊರಬೀಳಲಿದೆ. ಸ್ಥಳೀಯ ಶಾಸಕನಾಗಿ ನಗರಸಭೆಯಲ್ಲಿ ಅಧಿಕಾರ ದೊರೆತರೆ ಹೊಸಕೋಟೆ ನಗರ ಹಾಗೂ ತಾಲೂಕು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು.
ನಗರಸಭೆಯಲ್ಲಿ ಬಿಜೆಪಿ ಗೆದ್ದರೆ ಸರ್ಕಾರದಿಂದ ಒಂದೇ ವಾರದಲ್ಲಿ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿ ಹೊಸಕೋಟೆಯನ್ನು ಮಾದರಿ ನಗರವನ್ನಾಗಿಸುವುದಾಗಿ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಐದಾರು ವರ್ಷಗಳಿಂದ ಮೆಟ್ರೋ ತರುತ್ತೇನೆ, ಕಾವೇರಿ ನೀರು ತರುತ್ತೇನೆ ಎಂದು ಹೇಳುತ್ತಿದ್ದಾರೆ. ಅದೇ ರೀತಿ ಸರ್ಕಾರದಿಂದ 20 ಕೋಟಿ ರೂ. ತರಬಹುದು ಎಂದು ಪ್ರತಿಕ್ರಿಯಿಸಿದರು.
ಶೇ.75.76 ಮತದಾನ: ನಗರಸಭಾ ಚುನಾವಣೆಯಲ್ಲಿ ಶೇ.78.36 ಮತದಾನವಾಗಿದೆ. 47364 ಮತದಾರರ ಪೈಕಿ 17970 ಪುರುಷರು ಹಾಗೂ 17915 ಮಹಿಳೆಯರು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.