ನಂಜನಗೂಡಿನಲ್ಲಿ 113 ಕ್ವಿಂಟಾಲ್ ಪಡಿತರ ಅಕ್ಕಿ ವಶ

Oplus_16908288
ನಂಜನಗೂಡು 6ನೇ ವಾರ್ಡ್‌ನ ಉರ್ದು ಶಾಲೆಯ ಬಳಿ ಅಕ್ರಮ ಪಡಿತರ ಅಕ್ಕಿಯನ್ನು ಪೊಲೀಸರು ವಸಕ್ಕೆ ಪಡೆದಿರುವುದು.
Published on

ನಂಜನಗೂಡು: ಪಟ್ಟಣ 6ನೇ ವಾರ್ಡ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 113 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶ ಪಡೆಸಿಕೊಂಡಿದ್ದಾರೆ.

ಪಟ್ಟಣ 6ನೇ ವಾರ್ಡ್ ಉರ್ದು ಶಾಲೆಯ ಬಳಿ ಸೋಮವಾರ ರಾತ್ರಿ ಅಕ್ರವಾಗಿ ಎರಡು ಮಿನಿ ಗೂಡ್ಸ್ ವಾಹನದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಟ್ಟಣ ಪೋಲಿಸರು ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ. ತಕ್ಷಣವೇ ವಾಹನ ಚಾಲಕರು ಪರಾರಿಯಾಗಿದ್ದು, ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಾರ್ಯಾಚರಣೆಯಲ್ಲಿ ಎಎಸ್‌ಐ ಮಂಜುನಾಥ್, ಗುಪ್ತಚರ ಪೊಲೀಸ್ ತಿಮ್ಮಯ್ಯ, ಆಹಾರ ನಿರೀಕ್ಷಕಿ ಎಚ್.ಆರ್.ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net