

ಮೈಸೂರು: ಸಾರ್ವಜನಿಕರು ಏನಾದರೂ ತೊಂದರೆಯಾದಲ್ಲಿ ತಕ್ಷಣ ಉಚಿತ ಟೋಲ್ ಸಂಖ್ಯೆ ‘112’ಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸದಾ ಸನ್ನದ್ಧವಾಗಿದ್ದಾರೆ. ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ 20 ವಾಹನ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದ್ದು, ಸಾರ್ವಜನಿಕರು ಕರೆ ಮಾಡಿದ ಕೇವಲ 5ರಿಂದ 6 ನಿಮಿಷಗಳ ಒಳಗೆ ಪೊಲೀಸರು ನಿಮ್ಮ ಬಳಿ ಇರುತ್ತಾರೆ. ಆದರೆ ಬಹಳಷ್ಟು ಜನರು ‘112’ಗೆ ಕರೆ ಮಾಡದೆ ಪೊಲೀಸ್ ಠಾಣೆ, ಅಧಿಕಾರಿಗಳು, ಸಿಬ್ಬಂದಿಗೆ ಕರೆ ಮಾಡುತ್ತಾರೆ. ಅವರು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡುವ ವೇಳೆಗೆ ಸಮಯ ಮೀರಿರುತ್ತದೆ. ಆದ್ದರಿಂದ ನೇರವಾಗಿ ಟೋಲ್ ಫ್ರೀಗೆ ಕರೆ ಮಾಡಿದರೆ ತಕ್ಷಣ ಜನರ ಬಳಿ ಪೊಲೀಸರು ಬರಲಿದ್ದಾರೆ. ಈ ಸೇವೆಯಲ್ಲಿ ಮೈಸೂರು ಮುಂದಿದ್ದು, ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ರಮೇಶ್ ಬಾನೋತ್ ಮನವಿ ಮಾಡಿದರು.