112 ಮಕ್ಕಳಿಗೆ ವಿಜಯವಾಣಿ- ವಿದ್ಯಾರ್ಥಿಮಿತ್ರ ವಿತರಣೆ

27-11-krs1 (2)
Published on

 ಕೆ.ಆರ್.ಸಾಗರ : ಕೆ.ಆರ್.ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ 112 ವಿದ್ಯಾರ್ಥಿಗಳಿಗೆ ಬುಧವಾರ ಕನ್ನಡದ ನಂ. 1ದಿನಪತ್ರಿಕೆ ವಿಜಯವಾಣಿಯ ‘ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯನ್ನು ಉಚಿತವಾಗಿ ವಿತರಿಸಲಾಯಿತು.

ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆ.ಆರ್.ಸಾಗರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಕುಮಾರ್ ಸಾಂಕೇತಿಕವಾಗಿ ಮಕ್ಕಳಿಗೆ ಸಂಚಿಕೆ ನೀಡಿದ್ದು, 5 ತಿಂಗಳ ಅವಧಿಗೆ ಪ್ರಾಯೋಜಕರಾಗಿದ್ದಾರೆ.

ನಂತರ ಮಾತನಾಡಿದ ಕುಮಾರ್, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಪೂರಕವಾಗಿದೆ ಎಂದರು. ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಈ ಸಂಚಿಕೆಯಲ್ಲಿ ಬರುತ್ತಿರುವ ಮಾದರಿ ಪ್ರಶ್ನೆ- ಉತ್ತರಗಳು, ರಸಪ್ರಶ್ನೆ, ಪದಬಂಧ, ಸ್ಪರ್ಧಾತ್ಮಕ ಪರೀಕ್ಷ್ಷಾ ಮಾಹಿತಿ, ಕನ್ನಡ ವ್ಯಾಕರಣ, ಇಂಗ್ಲಿಷ್ ಗ್ರಾಮರ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮಾಹಿತಿಗಳು ಹಿರಿಯರಿಗೂ ಉಪಯುಕ್ತವಾಗಿವೆ. ಇಂಥ ಸಂಚಿಕೆಯನ್ನು ನಿತ್ಯವೂ ಓದಿ ಉನ್ನತ ಹುದ್ದೆ ಗಳಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉಪ ಪ್ರಾಂಶುಪಾಲ ಉಮೇಶ್ವರ್, ಕಾಲೇಜು ವಿಭಾಗದ ಪ್ರಭಾರ ಪ್ರಾಂಶುಪಾಲ ಚಂದ್ರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net