111 ಅಗ್ನಿವೀರರು ದೇಶಸೇವೆಗೆ ಸಮರ್ಪಣೆ

IMG-20230805-WA0022.jpg
Published on

ಬೆಳಗಾವಿ: ನಗರದ ಮರಾಠಾ ಲಘುಪದಾತಿ ದಳದಲ್ಲಿ (ಎಂಎಲ್ಐಆರ್ ಸಿ)
ತರಬೇತಿ ಪೂರ್ಣಗೊಳಿಸಿದ 'ಅಗ್ನಿವೀರ' ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಮಳೆ ಮಧ್ಯೆಯೇ ನಡೆಯಿತು.
ಎಂಎಲ್ ಐಆರ್ ಸಿಯಲ್ಲಿ 31 ವಾರ ತರಬೇತಿ ಪಡೆದು, 111 ಅಗ್ನಿವೀರರು ದೇಶಸೇವೆಗೆ ಅಣಿಯಾದರು.
ಮಳೆಯಲ್ಲೇ ಅಗ್ನಿವೀರರು ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು. ಅವರು ತಾವು ಪಡೆದ ಕೌಶಲಗಳನ್ನು ಪ್ರದರ್ಶಿಸಿ, ಸಾಮರ್ಥ್ಯ ಅನಾವರಣಗೊಳಿಸಿದರು.
ಜ್ಯೂನಿಯರ್ ಲೀಡರ್ಸ್ ವಿಂಗ್ ಕಮಾಂಡರ್ ಮೇಜರ್ ಜನರಲ್ ಆರ್.ಎಸ್.ಗುರಯ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net