

ಕಂಪ್ಲಿ: ಪಟ್ಟಣದಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣ ಖಚಿತ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಕೋಟೆ ಬಳಿ ಮೂರು ಕೋಟಿ ರೂ., ವಾಲ್ಮೀಕಿ ವೃತ್ತದ ಬಳಿ 6.70 ಕೋಟಿ ರೂ., ವೆಚ್ಚದಲ್ಲಿ ಮುದಗಲ್-ಕುಡತಿನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ 60 ಕೋಟಿ ರೂ., ನಬಾರ್ಡ್‌ನ 50 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಒತ್ತಾಯಿಸಲಾಗಿದೆ ಎಂದರು.
ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಕೆ.ಶ್ರೀನಿವಾಸ ರಾವ್, ಎನ್.ಹಬೀಬ್ ರೆಹಮಾನ್, ಕೆ.ಎಸ್.ಚಾಂದ್ ಬಾಷ, ಲಡ್ಡು ಹೊನ್ನೂರವಲಿ, ಡಿ.ಮೌನೇಶ, ಗದ್ಗಿ ವಿರೂಪಾಕ್ಷಿ, ಜಿ.ಬಿ.ಕೋಟೇಶ್, ಮಹಂತಿನಮಠದ ಭಾರತೀಶಸ್ವಾಮಿ, ಎ.ಸಿ.ದಾನಪ್ಪ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಎಂ.ಸುಧೀರ್, ಡಿಶ್ ಪ್ರಸಾದ್, ಕೆ.ಮಸ್ತಾನ್, ಎನ್.ತಿಮ್ಮಪ್ಪನಾಯಕ, ಕೊಟ್ಟೂರು ರಮೇಶ, ಕರೇಕಲ್ ಮನೋಹರ, ಕನಕಗಿರಿ ರೇಣುಕಪ್ಪ ಇತರರರಿದ್ದರು.