ಮೈಸೂರಿನಲ್ಲಿ 110 ಸಾಧಕ ಶಿಕ್ಷಕರಿಗೆ ‘ಶಿಕ್ಷಕ ಸಾಧಕ ರತ್ನ ಪ್ರಶಸ್ತಿ’ ಪ್ರದಾನ

110 teachers in Mysore awarded Shikshaka Sadhaka Ratna
Published on

ಮೈಸೂರು: ಪರೀಕ್ಷಾ ಸ್ಫೂರ್ತಿ ಫೌಂಡೇಷನ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ನಗರದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯದ 110 ಸಾಧಕ ಶಿಕ್ಷಕರಿಗೆ ‘ಶಿಕ್ಷಕ ಸಾಧಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ನನಗೆ ಅರಿವು ಇದ್ದು, ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಗೋಪಲಗೌಡ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶ್ರೂತ್ ಗೌಡ, ಇಫಿಮೆಡ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎ. ಸುಧೀಂದ್ರ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಪರೀಕ್ಷಾ ಸ್ಫೂರ್ತಿ ಫೌಂಡೇಷನ್ ಅಧ್ಯಕ್ಷ ಯೋಗೇಶ್ ಚುಂಚನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net