

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಮತ್ತು ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ನಗರದ ಎಂ.ಆರ್. ಸಾಖರೆ ಶಾಲಾ ಕ್ರೀಡಾ ಮೈದಾನದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಬುಧವಾರ ಸಿಎಸ್‌ಆರ್ ಅನುದಾನದಡಿ 4.10 ಲಕ್ಷ ರೂ. ಮೌಲ್ಯದ 110 ಸೈಕಲ್ ವಿತರಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಸೈಕಲ್ ವಿತರಿಸಿ ಮಾತನಾಡಿ, ಓದುವ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ. ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳು ಏನಾದರೊಂದು ದೇಣಿಗೆ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ನೋಡಿ ಖುಷಿಯಾಗಿದೆ. ಸರ್ಕಾರ ಮಾಡದೇ ಇರುವ ಕೆಲಸ ಸಂಘ-ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಜಿಲ್ಲಾ ಗವರ್ನರ್ ಶರದ ಪೈ, ಮುತ್ತೂಟ ಫೈನಾನ್ಸ್ ಲಿಮಿಟೆಡ್ ವ್ಯವಸ್ಥಾಪಕ ಸನೋಜ ರಾಮಕೃಷ್ಣನ್, ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಪ್ರಮುಖರಾದ ರಾಜೇಶ್ವರಿ ಸಂಜಿ, ರೀಟಾ ಹಂಡಾ, ಅಜಿತಕುಮಾರ, ಮಹಿಮಾ ದಂಡ, ಶ್ರೀದೇವಿ ರೂಗಿ, ಶ್ರೀವಳ್ಳಿ ಹೆಬಸೂರ, ರಾಧಿಕಾ ಗೋಖಲೆ, ಪ್ರೊ. ಸಂಜಯ ಕೊಟಬಾಗಿ, ವಾಸುಕಿ ಸಂಜಿ, ಡಾ. ನಾಗರೇಖಾ ಹೆಬಸೂರ, ತಲತ್ ಮುಜಾಹಿದ್, ಭಾರತಿ ಮಹಾಜನ್, ನೀಫಾ ಮೆಹತಾ, ಮಂಜುನಾಥ ಹೊಂಬಳ, ಜಿ.ಆರ್. ಮಹೇಶ ಇತರರು ಇದ್ದರು.