11 ಸದಸ್ಯರ ಅವಿರೋಧ ಆಯ್ಕೆ

13 TTH 02
ಟಿಎಪಿಸಿಎಂಎಸ್ ಸಂಸ್ಥೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಸಹಕಾರ ಭಾರತಿ ತಂಡದ ಕೆ.ನಾಗರಾಜ ಶೆಟ್ಟಿ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಗೌರವಿಸಲಾಯಿತು.
Published on

ತೀರ್ಥಹಳ್ಳಿ: ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯ 14 ಸ್ಥಾನಗಳಲ್ಲಿ ಸಹಕಾರ ಭಾರತಿ ತಂಡದ 11 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಸಹಕಾರ ಭಾರತಿ ತಂಡದ ಪ್ರಾಮಾಣಿಕ ಆಡಳಿತಕ್ಕೆ ಸಂದ ಗೆಲುವು ಎಂದು ಶಾಸಕ ಆರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದರು.

ರೈತರ ಬೇಡಿಕೆಗಳಿಗೆ ಅನುಗುಣವಾಗಿ ಕಪ್ಪುಚುಕ್ಕೆ ಇಲ್ಲದಂತೆ ಪಾರದರ್ಶಕ ಆಡಳಿತ ನಡೆಸುವ ಮೂಲಕ ವರ್ಷದಿಂದ ವರ್ಷಕ್ಕೆ ಸಹಕಾರ ಭಾರತಿ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲೆಯಲ್ಲಿ ಸಹಕಾರ ಸಂಸ್ಥೆ ಎಂದರೆ ಸಹಕಾರ ಭಾರತಿ ಎಂಬಂತಾಗಿದೆ. ತಾಲೂಕಿನ 24 ಸಹಕಾರ ಸಂಸ್ಥೆಗಳ 15 ಸಂಘಗಳಲ್ಲಿ ಸಹಕಾರ ಭಾರತಿ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ಮಾತನಾಡಿ, ಚುನಾವಣೆಯಿಂದ ಸಂಸ್ಥೆಗೆ ಆಗಬಹುದಾಗಿದ್ದ 5 ಲಕ್ಷ ರೂ. ಆರ್ಥಿಕ ಹೊರೆ ತಪ್ಪಿದಂತಾಗಿದೆ ಎಂದರು. ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಗಿರಿಯಪ್ಪ ಗೌಡ, ಶಿವಕುಮಾರ್, ಸಾಲೇಕೊಪ್ಪ ರಾಮಚಂದ್ರ ಇದ್ದರು.

ಚುನಾಯಿತ ಸದಸ್ಯರು

ಕೆ.ನಾಗರಾಜ ಶೆಟ್ಟಿ, ಶಿವಕುಮಾರ್, ಕೆ.ವಿ.ಅಂಜೂರ, ಅಭಿನಂದನ್, ದೇವರಾಜ, ರಮೇಶ್, ಸತೀಶ್, ರಾಘವೇಂದ್ರ, ವಾಸುದೇವ, ಎನ್.ಜಿ. ಬಾಬು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net