11 ಕ್ವಿಂಟಾಲ್ ಪಡಿತರ ಅಕ್ಕಿ ವಶ

dvd ration
ಗಬ್ಬೂರು ಹೋಬಳಿಯಲ್ಲಿ ಅನ್ನಭಾಗ್ಯ ಅಕ್ಕಿ ಅನಧಿಕೃತವಾಗಿ ಸಾಗಿಸುವ ವೇಳೆ ವಶಕ್ಕೆ ಪಡೆದ ಆಟೋ.
Published on

ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿಯ ಎನ್.ಗಣೇಕಲ್, ಮಸಿದಾಪುರ ರಸ್ತೆ ಬಳಿ ಟಂಟಂ ಆಟೋದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 11.65 ಕ್ವಿಂ. ಅಕ್ಕಿ ಗುರುವಾರ ವಶಕ್ಕೆ ಪಡೆದಿದ್ದಾರೆ.

ವಿವಿಧ ಗ್ರಾಮಗಳಲ್ಲಿ ಜನರಿಂದ ಪಡಿತರ ಅಕ್ಕಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಟಂಟಂ ಆಟೋದಲ್ಲಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ತಾಲೂಕು ಆಹಾರ ನಿರೀಕ್ಷಕ ಖಲೀಲ್ ಅಹಮ್ಮದ್, ಗಬ್ಬೂರು ಠಾಣೆ ಪಿಎಸ್‌ಐ ಅರುಣ್‌ಕುಮಾರ ರಾಠೋಡ್ ಜಂಟಿಯಾಗಿ ದಾಳಿ ನಡೆಸಿದ್ದಾರೆ.

32 ಸಾವಿರ ರೂ. ಮೌಲ್ಯದ 11.65 ಕ್ವಿಂ. ಅಕ್ಕಿ ಹಾಗೂ ಅಕ್ಕಿ ಸಾಗಿಸುತ್ತಿದ್ದ ಆಟೋ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖಂಡರಾದ ತೂಕಾರಾಮ್ ಎನ್.ಗಣೇಕಲ್, ಬಸಲಿಂಗ ಎನ್.ಗಣೇಕಲ್ ಹಾಗೂ ಪೊಲೀಸರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net