ಜುಗಾರಿ ಆಟ ಆಡುತ್ತಿದ್ದ 11 ಜನರ ಬಂಧನ

GAMBLING
Published on

ಕುಂದಾಪುರ: ಕಕುರ್ಂಜೆ ಗ್ರಾಮದ ಮುಕ್ಕೋಡು ರಾಜೀವ ಎಂಬುವರ ಕ್ಯಾಟರಿಂಗ್ ಶೆಡ್‌ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 11 ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ, ಅಭಿಜಿತ್, ಸತೀಶ್, ಗಣಪತಿ, ಈಶ್ವರ, ಸುಬ್ಬಣ್ಣ, ಭಾಸ್ಕರ, ಮಂಜುನಾಥ, ಸುರೇಶ, ವಿಜಯ ಮತ್ತು ನಿತೇಶ್ ಬಂಧಿತರು. ಬಂಧಿತರಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1,10,790/- ರೂ.ನಗದು, ಇಸ್ಪೀಟ್ ಎಲೆಗಳು, ಇಸ್ಪೀಟ್ ಜುಗಾರಿ ಆಟ ಆಡಲು ಬಳಸಿದ ಸಲಕರಣೆಗಳು, ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ 12 ಮೊಬೈಲ್, ಸ್ಕೂಟರ್, ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net